ಟ್ವೀಟರ್ ಫಾಲೋವರ್ಸ್ ಕುರಿತ ರಾಹುಲ್ ವಿಚಾರಕ್ಕೆ ಸ್ಪಷ್ಟನೆ ನೀಡಿದ ಟ್ವೀಟರ್….
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಟ್ವೀಟರ್ ಗೆ ಪತ್ರ ಬರೆದಿದ್ದಾರೆ, ಕೇಂದ್ರ ಸರ್ಕಾರದ ಸೂಚನೆಯಂತೆ ನಮ್ಮ ಟ್ವೀಟರ್ ಖಾತೆಯ ಫಾಲೋವರ್ಸ ಗಳನ್ನ ಹತ್ತಿಕ್ಕಲು ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಟ್ವೀಟರ್ ಪ್ರತಿಕ್ರಿಯೇ ನೀಡಿದ್ದು. ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯ ಅನುಯಾಯಿಗಳ ಸಂಖ್ಯೆ ಕಡಿಮೆಯಾಗಲು ಅದರ ಸ್ಪ್ಯಾಮ್ ಫಿಲ್ಟರ್‌ಗಳು ಕಾರಣವೆಂದು ಸಂಸ್ಥೆ ಹೇಳಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ ಹೊಸ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದರು, ಅವರ ಅನುಯಾಯಿಗಳ ಸಂಖ್ಯೆಯನ್ನು “ಇದ್ದಕ್ಕಿದ್ದಂತೆ ನಿಗ್ರಹಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಟ್ವೀಟರ್ ನೀತಿಯನ್ನ ಉಲ್ಲಂಘಿಸಿದ್ದಕ್ಕಾಗಿ ಪ್ರತಿದಿನ ನಾವು ಲಕ್ಷಾಂತರ ಖಾತೆಗಳ ನಿರ್ಬಂಧಿಸುತ್ತೇವೆ. ಈ ಕುರಿತು ಟ್ವೀಟರ್ ಟ್ರಾನ್ಸ್ ಫೆರೆನ್ಸಿ ಸೆಂಟರ್ ನಲ್ಲಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ.
Bengaluru | ವೈದ್ಯರ ಎಡವಟ್ಟಿಗೆ ಕಾಲು ಕಳೆದುಕೊಳ್ಳಲಿರುವ ಯುವಕ








