Twitter : ಅರ್ಧದಷ್ಟು ಉದ್ಯೋಗಿಗಳನ್ನ ವಜಾಗೊಳಿಸಲು ಮುಂದಾದ ಟ್ವೀಟರ್…
ಸಾಮಾಜಿಕ ಜಾಲತಾಣ ಟ್ವಿಟರ್ ಶುಕ್ರವಾರ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಅರ್ಧದಷ್ಟು ಜನರನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ.
ಕೆಲಸದಲ್ಲಿ ಮುಂದುವರಿಯಬೇಕೆ ? ಬೇಡವೇ ? ಎಂಬ ವಿಷಯವನ್ನ ವೈಯಕ್ತಿಕ ಇ-ಮೇಲ್ ಐಡಿಗಳಿಗೆ ಪತ್ರಗಳನ್ನ ಕಳುಹಿಸಲಾಗುವುದು ಎಂದು ಟ್ವಿಟರ್ ಹೇಳಿದೆ. ಟ್ವೀಟರ್ ಮಾಲೀಕತ್ವವನ್ನ ಎಲೋನ್ ಮಸ್ಕ್ ವಹಿಸಿಕೊಂಡ ನಂತರ, ಕೆಲವು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಲಾಗಿದೆ.
ಈಗಾಗಲೇ ಟ್ವಿಟರ್ ಕಚೇರಿಗಳನ್ನು ಮುಚ್ಚಲಾಗಿದೆ. ಎಲ್ಲ ನೌಕರರ ಬ್ಯಾಡ್ಜ್ಗಳನ್ನು ಅಮಾನತುಗೊಳಿಸಲಾಗಿದೆ. ಉದ್ಯೋಗದಲ್ಲಿ ಮುಂದುವರಿಯುವವರಿಗೆ ಟ್ವಿಟರ್ ಇ-ಮೇಲ್ ಮೂಲಕ ಸೂಚನೆ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ವಜಾಗೊಳಿಸಿದ ಸಂತ್ರಸ್ತರಿಗೆ ಅವರ ವೈಯಕ್ತಿಕ ಇ-ಮೇಲ್ ಐಡಿಯಲ್ಲಿ ತಿಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಶುಕ್ರವಾರದೊಳಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಮತ್ತು ನವೆಂಬರ್ 4 ರಂದು ಬೆಳಿಗ್ಗೆ 9 ಗಂಟೆಗೆ PST (ಪೆಸಿಫಿಕ್ ಸ್ಟ್ಯಾಂಡರ್ಡ್ ಟೈಮ್) ಮೂಲಕ ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಲಾಗುವುದು.
ವಜಾಗೊಳಿಸುವ ಮೊದಲು, ಟ್ವಿಟರ್ ಸುಮಾರು 7,500 ಉದ್ಯೋಗಿಗಳನ್ನು ಹೊಂದಿತ್ತು. ಅವರಲ್ಲಿ ಅರ್ಧದಷ್ಟು ಮಂದಿಯನ್ನ ಕೆಲಸದಿಂದ ವಜಾ ಮಾಡಲಾಗುವುದು ಎಂದು ತೋರುತ್ತದೆ.
Twitter: Twitter to lay off half of its employees