Twitter Alternative: ಟ್ವೀಟರ್ ಗೆ ಪರ್ಯಾಯವಾಗಿ ಬರುತ್ತಿದೆ ‘ಸ್ಪಿಲ್ಲಾ’ ಅಪ್ಲಿಕೇಷನ್…
ಎಲಾನ್ ಮಸ್ಕ್ ಟ್ವೀಟರ್ ಸ್ವಾಧೀನಪಡಿಸಿಕೊಂಡ ನಂತರ ಹಲವಾರು ಬದಲಾವಣೆಗಳನ್ನ ಮಾಡಲಾಗಿದೆ ಈ ಬದಲಾವಣೆಗಳಲ್ಲಿ ಪ್ರಮುಖವಾದದ್ದು ಅರ್ಧದಷ್ಟು ಉದ್ಯೋಗಿಗಳನ್ನ ವಜಾಗೊಳಿಸಿದ್ದು, ಉದ್ಯೋಗ ಹಿಂಬಡ್ತಿ ಸೇರಿದಂತೆ ಆನೇಕ ಇತರ ನಿಯಮಗಳನ್ನ ಬದಲಾಯಿಸಲಾಗಿದ್ದು, ಪ್ಲಾಟ್ ಫಾರ್ಮ್ ಬಳಕೆದಾರರು ಟ್ವೀಟರ್ ಗೆ ಪರ್ಯಾಯವಾಗಿ ಅಪ್ಲಿಕೇಶನ್ಗಳನ್ನು ಹುಡುಕುತ್ತಿದ್ದಾರೆ.
Twitter ಪರ್ಯಾಯವಾಗಿ ಅನೇಕ ಅಪ್ಲಿಕೇಶನ್ಗಳು ಲಭ್ಯವಿವೆಯಾದರೂ ಈಗ Twitter ನಿಂದ ಹೊರಬಂದಿರುವ ಇಬ್ಬರು ಉದ್ಯೋಗಿಗಳು Twitter ಗೆ ಪರ್ಯಾಯವಾಗಿ ಅಪ್ಲಿಕೇಶನ್ ಅನ್ನ ತಯಾರಿಸಿದ್ದಾರೆ.
ಅಲ್ಫೊಂಜೊ ಫೊನ್ಜೆ ಟೆರೆಲ್ ಮತ್ತು ದೇವಾರಿಸ್ ಬ್ರೌನ್ ಎಂಬ ಇಬ್ಬರು ಟ್ವೀಟರ್ ಉದ್ಯೋಗಿಗಳನ್ನ ಕಳೆದ ತಿಂಗಳು ಅಂದರೆ ನವೆಂಬರ್ನಲ್ಲಿ ಕಂಪನಿಯಿಂದ ವಜಾಗೊಳಿಸಲಾಯಿತು. ಅಂದಿನಿಂದ ಇಬ್ಬರೂ ‘ಸ್ಪಿಲ್ಲಾ’ ಎಂಬ ಸಾಮಾಜಿಕ ಜಾಲತಾಣದ ಪ್ಲಾಟ್ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತು ಇದನ್ನ ಟ್ವಿಟರ್ ಪರ್ಯಾಯವಾಗಿ ತರಲು ಮುಂದಾಗುತ್ತಿದ್ದಾರೆ.
ಜನವೆರಿಯಲ್ಲಿ ಈ ಸ್ಪಿಲ್ ಅಪ್ಲಿಕೇಷನ್ ಅನ್ನ ಪ್ರಾರಂಭಿಸಿಲಾಗುವುದು ಎಂದು ಸ್ಪಿಲ್ ರಚನೆಕಾರರಾದ ಟೆರೆಲ್ ಮತ್ತು ಬ್ರೌನ್ ಹೇಳಿದ್ದಾರೆ.
ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ, ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ನೆಡ್ ಸೆಗಲ್ ಸೇರಿದಂತೆ ಹಲವಾರು ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಲಾಗಿದೆ. ಇದರ ನಂತರ, ವಿಶ್ವದಾದ್ಯಂತ ಟ್ವಿಟರ್ನ 7500 ಉದ್ಯೋಗಿಗಳಲ್ಲಿ ಸುಮಾರು 3700 ಜನರನ್ನು ಮಸ್ಕ್ ವಜಾಗೊಳಿಸಿದರು. ವಜಾಗೊಂಡ ಉದ್ಯೋಗಿಗಳಿಗೆ ಹಿಂದಿನ ದಿನ ಕಂಪನಿಯ ಕಂಪ್ಯೂಟರ್ಗಳು ಮತ್ತು ಇ-ಮೇಲ್ಗಳ ಪ್ರವೇಶವನ್ನ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
Two Employees Are Building A New Twitter Alternative App Spilla