ಪಾಕಿಸ್ತಾನದಲ್ಲಿ ಸ್ಪೋಟ ಕಟ್ಟಡ ಕುಸಿದು 14 ಮಂದಿ ಬಲಿ…
ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿಯಲ್ಲಿ ಶನಿವಾರ ಸತತ ಎರಡು ಸ್ಫೋಟಗಳು ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲಾಗುತ್ತಿದೆ. ಗಾಯಾಳುಗಳು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಪಾಕಿಸ್ತಾನ ರೇಂಜರ್‌ಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಕರಾಚಿಯ ಶೇರ್ಷಾ ಪ್ರದೇಶದ ಪರಚಾ ಚೌಕ್ ಬಳಿ ಮಧ್ಯಾಹ್ನ 1.30 ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಖಾಸಗಿ ಬ್ಯಾಂಕ್‌ನ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಹೆಚ್ಚಿನ ಭಾಗ ಚರಂಡಿಯಲ್ಲಿ ಹೂತು ಹೋಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಎರಡನೇ ಸ್ಫೋಟ ಸಂಭವಿಸಿದೆ. ಅದರ ಸಾಮರ್ಥ್ಯವು ಹಳೆಯ ಸ್ಫೋಟಕ್ಕಿಂತ ಕಡಿಮೆ ಇದೆ. ಸ್ಫೋಟದಲ್ಲಿ ಕಟ್ಟಡದ ಬಳಿ ನಿಲ್ಲಿಸಿದ್ದ ವಾಹನಗಳು ತೀವ್ರವಾಗಿ ಹಾನಿಗೀಡಾಗಿವೆ. ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕರಾಚಿ ದಕ್ಷಿಣ ವಲಯದ ಡಿಐಜಿ ಶಾರ್ಜೀಲ್ ಖರಾಲ್ ಅವರು ಸ್ಫೋಟಕ್ಕೆ ಅನಿಲ ಸೋರಿಕೆಯ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಫೋಟದಲ್ಲಿ ಕುಸಿದು ಬಿದ್ದ ಬ್ಯಾಂಕ್ ಕಟ್ಟಡವನ್ನು ಅಕ್ರಮವಾಗಿ ಚರಂಡಿ ಮೇಲೆ ನಿರ್ಮಿಸಲಾಗಿತ್ತು. ಚರಂಡಿ ಸ್ವಚ್ಛಗೊಳಿಸುವಂತೆ ಬ್ಯಾಂಕ್‌ಗೆ ಕಟ್ಟಡ ತೆರವು ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ಬ್ಯಾಂಕ್ ಕಟ್ಟಡ ತೆರವು ಮಾಡಿರಲಿಲ್ಲ.