IND Vs SA : ಇಂಡೋ – ಆಫ್ರಿಕಾ ಮ್ಯಾಚ್ : ಸ್ಟೇಡಿಯಂನಲ್ಲಿ ಫ್ಯಾನ್ಸ್ ಗಲಾಟೆ
ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಗುರುವಾರ (ಜೂನ್ 9) ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಿತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು ಗೊತ್ತೇ ಇದೆ. ಆದ್ರೂ ಮೈದಾನದಲ್ಲಿ ಪಂದ್ಯ ಗಂಭೀರವಾಗಿ ನಡೆಯುತ್ತಿದ್ದರೆ.. ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಪೈಕಿ ಒಂದು ಗುಂಪು ಮಾತ್ರ ಎರಡು ಹೋಳಾಗಿ ಪರಸ್ಪರ ಬಡಿದಾಡಿಕೊಂಡಿದೆ.

ಆದ್ರೆ ಘರ್ಷಣೆಗೆ ಕಾರಣ ತಿಳಿದುಬಂದಿಲ್ಲ, ಆದರೆ ಎರಡು ಗುಂಪುಗಳು ಪರಸ್ಪರರ ಪಂಚ್ ಗಳ ಮಳೆ ಸುರಿಗೈದಿದೆ.
ಸುಮಾರು ಐದು ನಿಮಿಷಗಳ ಕಾಲ ಈ ಗಲಾಟೆ ನಡೆದಿದ್ದು, ಅಂತಿಮವಾಗಿ ದೆಹಲಿ ಪೊಲೀಸರ ಪ್ರವೇಶದೊಂದಿಗೆ ಜಗಳ ಅಂತ್ಯವಾಗಿದೆ.
ಪಂದ್ಯದ ಕೊನೆಯಲ್ಲಿ, ಪೊಲೀಸರು ಗಲಾಟೆ ಮಾಡುತ್ತಿದ್ದವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
https://twitter.com/i/status/1535272265717190656
ಈ ಎಲ್ಲಾ ಘಟನೆಗಳನ್ನು ವ್ಯಕ್ತಿಯೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ವಿಷಯ ಬೆಳಕಿಗೆ ಬಂದಿದೆ.