ವಿಡಿಯೋ-ಕಾನ್ಫರೆನ್ಸ್ ಮೂಲಕ ಉಕ್ರೇನ್, ರಷ್ಯಾ ಮಾತುಕತೆ – Saaksha Tv
ಉಕ್ರೇನ್: ರಷ್ಯಾ-ಉಕ್ರೇನ್ ಯುದ್ಧ 19ನೇ ದಿನವೂ ಮುಂದುವರೆದಿದ್ದು, ಉಕ್ರೇನ್, ರಷ್ಯಾದೊಂದಿಗೆ ಸಂಧಾನದ ಮಾತುಕತೆಯನ್ನು ಆಡಲು ಮುಂದಾಗಿದೆ.
ರಷ್ಯಾ ಕಾಲಮಾನ ಪ್ರಕಾರ ಬೆಳಗ್ಗೆ 10:30 ಕ್ಕೆ ಈ ಮಾತುಕತೆ ನಿಗದಿಯಾಗಿದ್ದು, ವಿಡಿಯೋ-ಕಾನ್ಫರೆನ್ಸ್ ಮೂಲಕ ಈ ಮಾತುಕತೆ ನಡೆಯಲಿದೆ ಎಂದು ಉಕ್ರೇನ್ ನಿಯೋಗದ ಮಾಹಿತಿ ಮೇರೆಗೆ ಎಟಿಎಫ್ ಈ ವರದಿ ಮಾಡಿದೆ.
ಈ ನಡುವೆ ಉಕ್ರೇನ್ ಅಧ್ಯಕ್ಷರು, ನಾಟೋ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾತುಕತೆ ನಡೆಸಿದರು. ಈ ವೇಳೆ, ಉಕ್ರೇನ್‌ನ ಯುರೋಪಿಯನ್ ಒಕ್ಕೂಟದ ಸದಸ್ಯತ್ವದ ಕುರಿತು ಚರ್ಚಿಸಲಾಯಿತು. ಹಾಗೂ ಯುದ್ಧ ನಿಲ್ಲಿಸುವ ಸಂಬಂಧವೂ ಸಂಧಾನ ಮಾತುಕತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು.
ರಷ್ಯಾ ಮಿಸೈಲ್ಗಳು ನಮ್ಮ ನೆಲಕ್ಕೆ ಬೀಳುವ ಮುನ್ನವೇ ಉಕ್ರೇನ್ ನೋ ಪ್ಲೈಯಿಂಗ್ ಜೋನ್ ಎಂದು ಘೋಷಿಸಬೇಕು. ಇದಕ್ಕಾಗಿ ನಾಟೋ ಒಂದು ನಿರ್ಧಾರ ಕೈಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷರು, ಯುರೋಪಿಯನ್ ಯೂನಿಯನ್ ಅನ್ನು ಕೋರಿಕೊಂಡರು.