Ukraine russia war : ಉಕ್ರೇನ್ ಮೇಲೆ ಒಂದೇ ದಿನ 70 ಕ್ಷಿಪಣಿ ದಾಳಿ ನಡೆಸಿದ ರಷ್ಯಾ
ಉಕ್ರೇನ್ ಮೇಲೆ ರಷ್ಯಾ ಶುಕ್ರವಾರ ಯುದ್ಧ ನಂತರದ ಅತಿದೊಡ್ಡ ದಾಳಿಯನ್ನ ನಡೆಸಿದೆ. ರಷ್ಯಾ ಒಂದೇ ದಿನದಲ್ಲಿ 70 ಕ್ಷಿಪಣಿಗಳನ್ನ ಉಡಾಯಿಸುವ ಮೂಲಕ ಉಕ್ರೇನ್ ಮೂರು ನಗರಗಳನ್ನ ನಾಶಪಡಿಸಿದೆ. ಉಕ್ರೇನಿಯನ್ ಅಧ್ಯಕ್ಷ ಝೇಲೆನ್ಸಿ ಹೇಳಿರವ ಪ್ರಕಾರ ಕ್ರವಿ ರಿಹ್ ಪ್ರದೇಶದಲ್ಲಿ ಕ್ರಿಪಣಿ ದಾಳಯಿಂದಾಗಿ ವಸತಿ ಕಟ್ಟಡ ಕುಸಿದದು ಮೂವರು ಸಾವನ್ನಪ್ಪಿದ್ದಾರೆ.
ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ರಾಜಧಾನಿ ಕೈವ್ ಮತ್ತು ಖಾರ್ಕಿವ್ ನಗರದ ಮೇಲೆ ರಷ್ಯಾ ಈ ದಾಳಿಗಳನ್ನ ನಡೆಸಿದೆ. ರಷ್ಯಾದ ದಾಳಿಗಳು ಖಾರ್ಕಿವ್ ಮತ್ತು ಸುಮಿ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಉಕ್ರೇನ್ ಕತ್ತಲಲ್ಲಿ ಮುಳುಗಿದೆ. ಉಕ್ರೇನ್‌ನ ವಿದ್ಯುತ್ ಪೂರೈಕೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಆಸ್ಪತ್ರೆಗಳು, ನೀರು ಸರಬರಾಜು ವ್ಯವಸ್ಥೆಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುವುದು. ಕ್ಷಿಪಣಿ ದಾಳಿಯ ನಂತರ ಕಟ್ಟಡಗಳು ಹಾನಿಗೊಳಗಾಗಿವೆ. ಜನರು ರಾತ್ರಿಯಿಡೀ ಮೆಟ್ರೋ ನಿಲ್ದಾಣಗಳು, ಬಂಕರ್‌ಗಳು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಅಡಗಿಕೊಂಡು ಕಾಲ ಕಳೆದಿದ್ದಾರೆ.
ರಷ್ಯಾ ವೈಮಾನಿಕ ದಾಳಿಯನ್ನು ನಿಲ್ಲಿಸುವವರೆಗೆ ಬಂಕರ್‌ಗಳಲ್ಲಿ ಇರುವಂತೆ ಕೈವ್ ಮೇಯರ್ ವಿಟಾಲಿ ಕ್ಲಿಟ್‌ಸ್ಕೊ ಶುಕ್ರವಾರ ಜನರನ್ನ ಒತ್ತಾಯಿಸಿದ್ದಾರೆ. ರಷ್ಯಾದ ದಾಳಿಯಿಂದಾಗಿ ಉಕ್ರೇನಿಯನ್ ನಗರವಾದ ಕ್ರೆಮಾನ್‌ಚುಕ್‌ನಲ್ಲಿ 200,000 ಜನರು ಚಳಿಗೆ ತುತ್ತಾಗಿದ್ದಾರೆ. ಅಲ್ಲಿನ ತಾಪಮಾನ ಮೈನಸ್ 10 ಡಿಗ್ರಿಗೆ ತಲುಪಿದೆ.
Ukraine russia war : Russian Air Strike Update; Ukraine (Kharkiv) Blackout Due To 70 Missile Attack