Umran Malik : ಉಮ್ರಾನ್ ಬಗ್ಗೆ ಸ್ಟೇನ್ ಹೇಳಿದ್ದ ಭವಿಷ್ಯ ಏನು ಗೊತ್ತಾ..?
ಕಾಶ್ಮೀರ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲಿಕ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು ಗೊತ್ತೇ ಇದೆ.
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ತಮ್ಮ ಕನಸು ನನಸಾಗಿದ್ದು, ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿರುವುದು ಸಂತಸದ ಸಂಗತಿ ಎಂದು ಉಮ್ರಾನ್ ಮಲಿಕ್ ಹೇಳಿದ್ದಾರೆ.
ತನ್ನ ವೇಗದಿಂದ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಚೆಳ್ಳೆ ಹಣ್ಣು ತಿನಿಸುತ್ತಿದ್ದ ಉಮ್ರಾನ್ ಮಲಿಕ್, ಐಪಿಎಲ್-2022 ರಲ್ಲಿ 22 ವಿಕೆಟ್ ಕಬಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ..
ಈ ಬಗ್ಗೆ ಮಾತನಾಡಿದ ಉಮ್ರಾನ್ ಮಲಿಕ್, “ನನಗೆ 2022ರ ಐಪಿಎಲ್ ಸಂಪೂರ್ಣ ಸೀಸನ್ ಆಗಿದೆ. ಟೀಂ ಇಂಡಿಯಾ ಆಯ್ಕೆಗಾರರ ಕರೆ ಸ್ವೀಕರಿಸುವ ನನ್ನ ಕನಸು ನನಸಾಗಿದೆ.
ನಾನು ಚೆನ್ನಾಗಿ ಬೌಲ್ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಇದೇ ವೇಳೆ ಸನ್‌ರೈಸರ್ಸ್ ವೇಗದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಅವರು, “ನನಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಾಗ ಡೇಲ್ ಸರ್ ಕೂಡ ಎಸ್‌ಆರ್‌ಹೆಚ್ ತಂಡದ ಬಸ್‌ನಲ್ಲಿದ್ದರು.
“ಎಲ್ಲರೂ ನನಗೆ ಶುಭ ಹಾರೈಸಿದರು, ಆದರೆ ಸ್ಟೇನ್ ಅವರು, ನೀನು ಟೀಂ ಇಂಡಿಯಾಗೆ ಆಯ್ಕೆ ಆಗುತ್ತೀಯಾ ಅಂತಾ ನಾನು ಮೊದಲೇ ಹೇಳಿದ್ದೇ ಅಲ್ವಾ ಎಂದು ಹೇಳಿದರು ಅಂತಾ ನೆನಪು ಮಾಡಿಕೊಂಡಿದ್ದಾರೆ.