ಸಂಪ್ ಗೆ ಬಿದ್ದು ಸಾವು ಗೆದ್ದು ಬಂದ ಪುಟ್ಟ ಕಂದ

1 min read
bengaluru

ಸಂಪ್ ಗೆ ಬಿದ್ದು ಸಾವು ಗೆದ್ದು ಬಂದ ಪುಟ್ಟ ಕಂದ

ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ಸಂಪ್ ಗೆ ಬಿದ್ದಿದ್ದ ಮಗುವನ್ನ ರಕ್ಷಣೆ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಏಪ್ರಿಲ್ 3 ರಂದು ಈ ಘಟನೆ ನಡೆಸಿದ್ದು, ಎಲೆಕ್ಟ್ರಾನಿಕ್ ಸಿಟಿಯ ಆಂಧ್ರ ಮೆಸ್ ಕಟ್ಟಡದ ಸಂಪಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು.

ಈ ವೇಳೆ ಅಲ್ಲಿಗೆ ನಡೆದುಕೊಂಡು ಬಂದ ಮಗು ತೆರೆದ ಸಂಪ್ ಗೆ ಬಿದ್ದಿದೆ. ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ.

ಆದ್ರೆ ಮಗು ಬಿದ್ದಿರೋದು ಯಾರ ಗಮನಕ್ಕೂ ಬಂದಿಲ್ಲ.

bengaluru

ಬಳಿಕ ಸುಮಾರು ಒಂದು ನಿಮಿಷದ ಬಳಿಕ ನೀರು ತುಂಬಿದ್ಯಾ ಇಲ್ವಾ ಅಂತ ನೋಡೋಕೆ ಬಂದ ಮಗುವಿನ ತಂದೆಗೆ ಮಗು ಸಂಪ್ ಗೆ ಬಿದ್ದಿರೋದು ತಿಳಿದುಬಂದಿದೆ.

ಸಂಪ್ ನಲ್ಲಿ ಮಗು ಕಾಣಿಸುತ್ತಿದ್ದಂತೆ ಸಂಪ್ ಗೆ ಇಳಿದ ಕಂದನ ರಕ್ಷಣೆ ಮಾಡಿದ್ದಾರೆ. ನಂತರ ಮಗುವಿನ ತಾಯಿ ಬಂದು ಮಗುವನ್ನ ಮೇಲೆತ್ತಿಕೊಂಡಿದ್ದಾರೆ.

ನಂತರ ಸೇರಿದ ಜನ ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸಹಾಯ ಮಾಡಿದ್ದಾರೆ.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd