ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ 40 ಲಕ್ಷ ಜನ ನಿರಾಶ್ರಿತರಾಗಿದ್ದಾರೆ –  UNHCR

1 min read

ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ 40 ಲಕ್ಷ ಜನ ನಿರಾಶ್ರಿತರಾಗಿದ್ದಾರೆ –  UNHCR

ಫೆಬ್ರವರಿ 24 ರಂದು ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್ ತೊರೆದಿದ್ದಾರೆ ಎಂದು ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನರ್ (UNHCR), ಹೇಳಿದೆ.

ಇದು  ಎರಡನೇ ಮಹಾಯುದ್ದ ನಂತರ ಯುರೋಪಿನ ಅತಿದೊಡ್ಡ ನಿರಾಶ್ರಿತರ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಇದು ದುರಂತದ ಮೈಲಿಗಲ್ಲು ಮತ್ತು ಇತ್ತೀಚಿನ ಇತಿಹಾಸದಲ್ಲೇ ವೇಗವಾಗಿ ನಿರಾಶ್ರಿತರ ವಲಸೆ ಹೋಗುತ್ತಿದ್ದಾರೆ ಎಂದು ಪೋಲೆಂಡ್‌ನ ಯುಎನ್‌ಎಚ್‌ಸಿಆರ್‌ನ ಹಿರಿಯ ತುರ್ತು ಸಂಯೋಜಕ ಅಲೆಕ್ಸ್ ಮಂಡ್ಟ್ ಅವರು ಹೇಳಿದರು.

UNHRC ಪ್ರಕಾರ, ಕಳೆದ ಐದು ವಾರಗಳಲ್ಲಿ ಉಕ್ರೇನ್‌ನಿಂದ 2.3 ಮಿಲಿಯನ್‌ಗಿಂತಲೂ ಹೆಚ್ಚು ನಿರಾಶ್ರಿತರು ಪೋಲೆಂಡ್‌ಗೆ, 6,08,000 ರೊಮೇನಿಯಾದಲ್ಲಿ, 3,87,000 ಕ್ಕೂ ಹೆಚ್ಚು ಮೊಲ್ಡೊವಾದಲ್ಲಿ ಮತ್ತು ಸುಮಾರು 3,64,000 ಹಂಗೇರಿಯಲ್ಲಿ ನಿರಾಶ್ರಿತರು ಪ್ರವೇಶಿಸಿದ್ದಾರೆ.

ಏತನ್ಮಧ್ಯೆ, , ಉಕ್ರೇನ್‌ನಿಂದ ನಿರಾಶ್ರಿತರಲ್ಲಿ ಅರ್ಧದಷ್ಟು ಮಕ್ಕಳು ಮತ್ತು ತಮ್ಮ ಮನೆಗಳಿಂದ ಪಲಾಯನ ಮಾಡುವ ಮಕ್ಕಳ ಸಂಖ್ಯೆ ಏರುತ್ತಲೇ ಇದೆ ಎಂದು ಯುಎನ್ ಮಕ್ಕಳ ಸಂಸ್ಥೆ ಯುನಿಸೆಫ್ ಹೇಳಿದೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd