ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ(UCC) ಜಾರಿಗೊಳಿಸಲು ಚಿಂತನೆ – CM ಬೊಮ್ಮಾಯಿ…
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸಲು ಮತ್ತು ಆ ಮೂಲಕ ಸಮಾಜದಲ್ಲಿ ಸಮಾನತೆ ಕಾಪಾಡಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದರು.
ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿಯ ಪ್ರಾಶಿಕ್ಷಾ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ, ಯುಸಿಸಿ ಸಾಮಾನ್ಯ ಕಾನೂನಾಗಿದ್ದು, ಇದು ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಅನ್ವಯವಾಗಬೇಕು. ರಾಜ್ಯದಲ್ಲಿ ಈ ಕಾನೂನನ್ನು ತರಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಮೇ 2022 ರಲ್ಲಿ, ಉತ್ತರಾಖಂಡ ಸರ್ಕಾರವು ಯುಸಿಸಿಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿಯನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಕ್ಟೋಬರ್ 29, 2022 ರಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರು ಯುಸಿಸಿಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ ಮತ್ತು ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಘೋಷಿಸಿದರು. ಅಸ್ಸಾಂ ಮತ್ತು ಹಿಮಾಚಲ ಪ್ರದೇಶ ಕೂಡ ಯುಸಿಸಿ ಜಾರಿಗೆ ತರಲು ಇದೇ ರೀತಿಯ ಉದ್ದೇಶವನ್ನು ವ್ಯಕ್ತಪಡಿಸಿವೆ.
ನಂತರ ಕಾಂಗ್ರೆಸ್ಗೆ ವಿರುದ್ಧ ವಾಗ್ದಾಳಿ ನಡೆಸಿದ “ಕಾಂಗ್ರೆಸ್ ಅಧಿಕಾರದ ನಂತರ ಎಲ್ಲರಿಗೂ ಸಮಾನತೆ ಕಲ್ಪಿಸುವ ಪ್ರಯತ್ನವನ್ನ ಯಾವತ್ತೂ ಮಾಡಲಿಲ್ಲ. ಸಂವಿಧಾನ ರಚನೆಯಾದ ನಂತರ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ಜನರಿಗೆ ತಿಳಿದಿದೆ. ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಲಾಯಿತು ಮತ್ತು ಅವರ ದೇಹವನ್ನು ಹೂಳಲು ತುಂಡು ಭೂಮಿಯನ್ನು ನಿರಾಕರಿಸಲಾಯಿತು. ಎಸ್ಸಿ, ಎಸ್ಟಿ ಮತ್ತು ಬಡವರನ್ನು ಕಾಂಗ್ರೆಸ್ ಗುಲಾಮರನ್ನಾಗಿ ಮಾಡಿತು. ಈಗ ಅವರ ಮುಖವಾಡ ಕಳಚಿದೆ.
ಬಿಜೆಪಿ ತನ್ನ ಸಿದ್ಧಾಂತಕ್ಕೆ ಬದ್ಧವಾಗಿದೆ ಮತ್ತು ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
Uniform Civil Code : Thinking to implement uniform civil code in the state – CM Bommai…