ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಗೆ ಮಸಿ ಬಳಿದು ಎನ್ ಎಸ್ ಯುಐ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಗೆ ಕಾರ್ಯಕರ್ತರು ನುಗಿ, ನಿರ್ಮಲಾ ಸೀತಾರಾಮನ್(Nirmala Sitharaman) ನಾಮಫಲಕಕ್ಕೆ ಎನ್ಎಸ್ಯುಐ (NSUI) ಕಾರ್ಯಕರ್ತರು ಮಸಿ ಬಳಿದಿದ್ದಾರೆ. ರಾಜ್ಯಕ್ಕೆ ತೆರಿಗೆ ಅನ್ಯಾಯ ಖಂಡಿಸಿ ಮಸಿ ಬಳಿದಿದ್ದಾರೆ. ಮಸಿ ಬಳಿದಿದ್ದಕ್ಕಾಗಿ NSUI ಕಾರ್ಯಕರ್ತರಾದ ಸೂರಜ್, ಲಕ್ಷ್ಯ ರಾಜ್, ನಿಶ್ಚಯ್ ಗೌಡ, ನರೇಶ್, ಕಾರ್ತಿಕ್ ಎಮಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.