ಈ ಡಿಜಿಟಲ್ ಕಾರ್ಯಕ್ರಮ 16 ವರ್ಷ ವಯೋಮಿತಿಯ ಎಲ್ಲ ಫುಟ್‍ಬಾಲ್ ಆಟಗಾರರಿಗೆ ಮುಕ್ತವಾಗಿದ್ದು, ಇದರಲ್ಲಿ ಸಂವಾದಾತ್ಮಕ ತರಬೇತಿ ಕಾರ್ಯಕ್ರಮ ಮತ್ತು ಪ್ರತಿ ಆಟಗಾರರಿಗೆ ಮಾಹಿತಿಯುಕ್ತ ಸೆಷನ್ ನಡೆಯಲಿದೆ. ಸಂವಾದಾತ್ಮಕ ತರಬೇತಿ ಕಾರ್ಯಕ್ರಮವು ನಾಲ್ಕು ಸೆಷನ್‍ಗಳ ಸರಣಿ ತಲಾ 60 ಮಂದಿ ಆಟಗಾರರಿಗೆ ಅವಕಾಶದ ಬಾಗಿಲು ತೆರೆಯಲಿದೆ. ಇದು ಅಟಗಾರರ ದೈಹಿಕ ಮತ್ತು ತಾಂತ್ರಿಕ ಅಭಿವೃದ್ಧಿಗೆ ನೆರವಾಗಲಿದೆ.
ಮ್ಯಾಂಚೆಸ್ಟರ್ ಯುನೈಟೆಡ್‍ನ ದಂತಕಥೆ ಡೆನಿಸ್ ಇರ್ವಿನ್ ಅವರು 18 ವರ್ಷ ವಯೋಮಿತಿ ತಂಡದ ಜತೆಗೆ ಡಿಸೆಂಬರ್ 07 ರಂದು ನಡೆದ ವೆಬಿನಾರ್‍ನಲ್ಲಿ 200 ಮಂದಿ ಯುವ ಫುಟ್‍ಬಾಲ್ ಆಟಗಾರರು ಮತ್ತು ಅವರ ಪೋಷಕರ ಜತೆ ಸಂವಾದ ನಡೆಸಿಕೊಟ್ಟರು.
“ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಫುಟ್‍ಬಾಲ್ ಅಭಿವೃದ್ಧಿಗೆ ತಳಹಂತದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯುನೈಟೆಡ್ ವಿ ಕಾರ್ಯಕ್ರಮವು ಇದನ್ನು ಖಾತರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಹೊಸ ಸಹಜ ಸ್ಥಿತಿ ರೂಪುಗೊಳ್ಳುತ್ತಿರುವಂತೆ, ಭೌತಿಕ ಕಾರ್ಯಕ್ರಮದ ಬದಲಾಗಿ ಎಲ್ಲೆಡೆ ಡಿಜಿಟಲ್ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮದ ನಿರಂತರತೆಯನ್ನು ಉಳಿಸಿಕೊಳ್ಳುವ ಮೂಲಕ, ಮಕ್ಕಳು ವಿಶ್ವದ ಆಕರ್ಷಕ ಕ್ಲಬ್ ಜತೆಗೆ ತಮ್ಮನ್ನು ತೊಡಗಿಸಿಕೊಳ್ಳಲು, ಕಲಿಯಲು ವಿಶಿಷ್ಟ ಅವಕಾಶ ಕಲ್ಪಿಸಿಕೊಡಲಾಗಿದೆ” ಎಂದು ಅಪೋಲೊ ಟೈರ್ಸ್ ಲಿಮಿಟೆಡ್‍ನ ಮಾರುಕಟ್ಟೆ, ಮಾರಾಟ ಮತ್ತು ಸೇವಾ ವಿಭಾಗ ಮುಖ್ಯಸ್ಥ ರಾಜೇಶ್ ದಹಿಯಾ, ಹೇಳಿದರು.