Uttara pradesha – 3 ದಿನಗಳಲ್ಲಿ ಕೊಲ್ಲುವುದಾಗಿ CM ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಲಕ್ನೋ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಆಗಸ್ಟ್ 2 ರಂದು ವಾಟ್ಸಾಪ್ ಸಂದೇಶ ಬಂದಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಮೂರು ದಿನಗಳಲ್ಲಿ ಕೊಲ್ಲಲಾಗುವುದು ಎಂದು ಹೇಳಲಾಗಿದೆ.
ಇದರಿಂದ ಎಚ್ಚೆತ್ತ ಯುಪಿ ಪೊಲೀಸರು ಈ ಬೆದರಿಕೆಯ ಸಂದೇಶದ ಕುರಿತು ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಸಂದೇಶದಲ್ಲಿ ಮೂರು ದಿನಗಳಲ್ಲಿ ಸಿಎಂ ಯೋಗಿಯನ್ನು ಬಾಂಬ್‌ನಿಂದ ಕೊಲ್ಲುವುದಾಗಿ ಎಚ್ಚರಿಸಿದ್ದಾನೆ.
ಜೀವ ಬೆದರಿಕೆ ಸಂದೇಶದ ಕುರಿತು ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಪೊಲೀಸ್ ಕಮಾಂಡರ್ ದೂರಿನ ಮೇರೆಗೆ ಬೆದರಿಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬೆದರಿಕೆ ಸಂದೇಶ ಕಳುಹಿಸಿದ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ.
ಸಿಎಂ ಯೋಗಿಗೆ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಸಿಎಂ ಯೋಗಿಗೆ ಬಾಂಬ್ ಬೆದರಿಕೆ ಅಲರ್ಟ್ ಬಂದಿತ್ತು. ಫೈರ್‌ಬ್ರಾಂಡ್ ರಾಜಕಾರಣಿ-ಸನ್ಯಾಸಿ ಯೋಗಿ ಆದಿತ್ಯನಾಥ್‌ಗೆ ಈ ಹಿಂದೆ ಹಲವು ಬಾರಿ ಇದೇ ರೀತಿ ಬೆದರಿಕೆಗಳು ಬಂದಿದ್ದವು.








