ಬಡವರಿಗೆ ತರಕಾರಿ ವಿತರಿಸಿದ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು
ಮೈಸೂರು : ಕೋವಿಡ್ ಸಮಯದಲ್ಲಿ ದೇಶವೇ ತತ್ತರಿಸಿ ಹೋಗಿದೆ.. ರಾಜ್ಯದಲ್ಲೂ ಪರಿಸ್ಥಿತಿ ವಿಷಮವಾಗಿದ್ದು, ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಲಾಕ್ ಡೌನ್ ಹೇರಿದೆ. ಆದ್ರೆ ಇದ್ರಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತವರಿಗೆ ಅನೇಕ ಸಿನಿಮಾ ತಾರೆಯರು ನೆರವಾಗಿದ್ದು, ಅದ್ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಹ ಒಬ್ಬರು.. ಉಪೇಂದ್ರ ಅವರು ತಮ್ಮ ಫೌಂಡೇಶನ್ ನ ಮೂಲಕ ಅನೇಕ ತಾರೆಯರ ಸಹಕಾರದಿಂದ ಕಲಾವಿದರ , ಸಿನಿಮಾರಂಗದ ಕಾರ್ಮಿಕರಿಗೆ ನೆರವಾಗಿದ್ದರು.. ಇದೀಗ ಅನ್ನದಾತರ ಸಹಾಯದಲ್ಲೂ ಮುಂಚೂಣಿಯಲ್ಲಿದ್ಧಾರೆ.
ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಬಡ ಕಲಾವಿದರಿಗೆ ಹಾಗೂ ಬಡ ಜನರಿಗೆ ವಿತರಿಸುವ ಕಾರ್ಯವನ್ನು ಮೈಸೂರಿನಲ್ಲಿ ಮುಂದುವರಿಸಿದ್ದಾರೆ. ಬಡ ಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದ, ಉಪೇಂದ್ರ ಅವರ ಅಭಿಮಾನಿಗಳ ತಂಡ ಇಂದು ತರಕಾರಿ ವಿತರಿಸಿದೆ. ಮೈಸೂರಿನ ಅಗ್ರಹಾರದಲ್ಲಿ ಟೊಮೇಟೋ, ಸೋರೆಕಾಯಿ, ಕುಂಬಳಕಾಯಿಯನ್ನು ಬಡ ಜನರಿಗೆ ವಿತರಿಸಿದ್ದಾರೆ.
ಮೈಸೂರಿನ ಶೂಟಿಂಗ್ ಶಿವು ನೇತೃತ್ವದಲ್ಲಿ ತರಕಾರಿ ಹಂಚಿಕೆ ಮಾಡಲಾಗಿದೆ. ತರಕಾರಿ ಪಡೆಯಲು ಸರತಿ ಸಾಲಿನಲ್ಲಿ ಜನರು ನಿಂತಿರುವ ಫೋಟೋಗಳನ್ನ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು ‘ಚಾಮರಾಜನಗರ ಶಿವಕುಮಾರ್ ಎಸ್. ರವರು 3000 kg ಟೊಮೇಟೋ 15,000 ರೂ ( ಸಾರಿಗೆ ವೆಚ್ಚ ಸೇರಿ ) 2000 kg ಮೈಸೂರಿನಲ್ಲಿ ಶಿವ ಅವರಿಗೆ ನೀಡಿದ್ದಾರೆ. ಶಿವ ಅವರ ನೇತ್ರತ್ವದಲ್ಲಿ ಮೈಸೂರಿನಲ್ಲಿ ವಿತರಿಸಲಾಯಿತು’ ಎಂದು ತಿಳಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ








