ಜನನಾಯಕರು ಸರಿ ಇದ್ದಿದ್ದರೆ ಎಲ್ಲವೂ ಸರಿಹೋಗ್ತಿತ್ತು , ರಾಜಕೀಯದಿಂದ ಹಣ ಕಿತ್ತಾಕಬೇಕಿದೆ – ಉಪೇಂದ್ರ

1 min read

ಜನನಾಯಕರು ಸರಿ ಇದ್ದಿದ್ದರೆ ಎಲ್ಲವೂ ಸರಿಹೋಗ್ತಿತ್ತು , ರಾಜಕೀಯದಿಂದ ಹಣ ಕಿತ್ತಾಕಬೇಕಿದೆ – ಉಪೇಂದ್ರ

ಚುನಾವಣೆ ಬಂದಾಗ ತಪ್ಪು ಮಾಡಿಬಿಟ್ಟು ಆಮೇಲೆ ಹೋರಾಟ ಪ್ರತಿಭಟನೆ ಮಾಡ್ತೀವಿ. ಜನರು ವಿಚಾರವಂತರಾಗಬೇಕು. ಸೂಕ್ತ ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ. ಆದರೆ ಪ್ರಸ್ತುತ ಎಲ್ಲದರಲ್ಲೂ ಬಿಸಿನೆಸ್ ಆಗಿದೆ. ಹಾಗಾಗಿ, ಇಂತಹ ಸ್ಥಿತಿ ಇದೆ. ರಾಜಕೀಯ ಎಂಬ ವ್ಯವಸ್ಥೆಯಿಂದ ಹಣ ಅನ್ನುವುದನ್ನು ಕಿತ್ತಾಕಬೇಕಿದೆ ಎಂದು ನಟ-ರಾಜಕಾರಣಿ ಉಪೇಂದ್ರ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಸ್ ಪರಿಸ್ಥಿತಿ ಬಗ್ಗೆ ಲಗಾಮು ಮುಹೂರ್ತ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು ರಾಜಕೀಯದಲ್ಲಿ ಬಿಸಿನೆಸ್ ಹೆಚ್ಚಾದ ಕಾರಣ ತೊಂದರೆಗಳು ಎದುರಾಗಿದೆ. ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯ ಎಂದಿದ್ದಾರೆ.

ಇದೇ ವೇಳೆ ಜನರನ್ನು ಪಾಲನೆ ಮಾಡಿ ಅಂತ ಹೇಳುವವರು ಅವರು ಮಾರ್ಗದರ್ಶಕರಾಗಬೇಕು ಅಲ್ಲವೇ. ರಾಜಕೀಯ ಸಭೆ, ಸಮಾರಂಭದಲ್ಲಿ ಸಾವಿರಾರು ಜನ ಸರ್ತಾರೆ. ಈ ಕಡೆ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾರೆ. ಆಗಲೇ ಜನ ಗೊಂದಲಕ್ಕೆ ಒಳಗಾಗುವುದು. ಅಲ್ಲಿ ಕೊರೊನಾ ಬರಲ್ಲ, ಇಲ್ಲಿ ಬಂದು ಬಿಡುತ್ತಾ ಎಂಬ ಮನಸ್ಥಿತಿ ಬೆಳಸಿಕೊಳ್ಳುತ್ತಾರೆ. ಜನನಾಯಕರು ಸರಿ ಇದ್ದಿದ್ದರೆ ಎಲ್ಲವೂ ಸರಿಹೋಗ್ತಿತ್ತು ಎಂದು ಕಿಡಿಕಾರಿದ್ದಾರೆ..

ಅಲ್ಲದೇ ಮೊದಲು ಮನಸ್ಸಿಗೆ ಕಾಯಿಲೆ ಬರುತ್ತೆ, ಆಮೇಲೆ ದೇಹಕ್ಕೆ ಬರುತ್ತೆ. ಹಾಗಾಗಿ, ಧೈರ್ಯವಾಗಿರಬೇಕು, ಧೈರ್ಯ ಕಳೆದುಕೊಳ್ಳಬಾರದು. ಧೈರ್ಯ ಇದೆ ಅಂತ ಸಾಮಾಜಿಕ ಜವಾಬ್ದಾರಿ ಮರೆಯಬೇಡಿ. ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ ಮಾಡಿದ್ದಾರೆ. ಇನ್ನೂ ಇಂದು ಉಪ್ಪಿ ಅಭಿನಯದ ಮುಮದಿನ ಹೊಸ ಸಿನಿಮಾ ಲಗಾಮು ಸೆಟ್ಟೇರಿದೆ. ಸಿನಿಮಾದಲ್ಲಿ ಉಪ್ಪಿಗೆ ಕೆ ಮಾದೇಶ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ನಾಯಕಿಯಾಗಿ ಹರಿಪ್ರಿಯಾ ಮಿಂಚಲಿದ್ದಾರೆ.

ಬೇಡಿಕೆಗೆ ತಕ್ಕಂತೆ ಆಮ್ಲಜನಕ ಪೂರೈಸಬೇಕು – ಸುಧಾಕರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd