ಬೆಂಗಳೂರು: ಪ್ರಸಕ್ತ ಸಾಲಿನ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, 1016 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ ಕರ್ನಾಟಕದ 25ಕ್ಕೂ ಅಧಿಕ ಅಭ್ಯರ್ಥಿಗಳು ಪಾಸ್ ಆಗಿದ್ದಾರೆ.
ಯುಪಿಎಸ್‍ಸಿಯಲ್ಲಿ ಉತ್ತರಪ್ರದೇಶದ ಆದಿತ್ಯ ಶ್ರೀವಾಸ್ತವ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಅನಿಮೇಶ್ ಪ್ರಧಾನ್ 2 ಮತ್ತು ತೆಲಂಗಾಣದ ಡೋಣೂರು ಅನನ್ಯ ರೆಡ್ಡಿ 3ನೇ ರ‍್ಯಾಂಕ್ ಪಡೆದಿದ್ದಾರೆ. ವಿಜಯಪುರದ ವಿಜೇತ ಹೊಸಮನಿ 100, ಧಾರವಾಡದ ಸೌಭಾಗ್ಯ 101, ಕೋಲಾರದ ನಾಗೇಂದ್ರ ಬಾಬು 160, ಹಾಸನದ ಶಶಾಂಕ್ 459ನೇ ರ‍್ಯಾಂಕ್ ಗಳಿಸುವುದರ ಮೂಲಕ ಯಶಸ್ವಿಯಾಗಿದ್ದಾರೆ.
ಇನ್ನುಳಿದಂತೆ ಶಿವಮೊಗ್ಗದ ಮೇಘನಾ 589ನೇ ರ‍್ಯಾಂಕ್ ಪಡೆದಿದ್ದಾರೆ. ರಾಜ್ಯದಿಂದ ಆಯ್ಕೆಯಾದವರ ಪೈಕಿ 12 ಅಬ್ಯರ್ಥಿಗಳು ಬೆಂಗಳೂರಿನಲ್ಲಿನ ಇಂಡಿಯಾ ಫಾರ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದಿದ್ದರೆ, ಡಾ. ರಾಜ್ ಅಕಾಡೆಮಿಯಲ್ಲಿ ನಾಲ್ವರು ತರಬೇತಿ ಪಡೆದವರು ಆಯ್ಕೆಯಾಗಿದ್ದಾರೆ.