Uttarakhand : ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಿದರೇ 10 ವರ್ಷ ಪರೀಕ್ಷೆಗೆ ಅನುಮತಿ ನಿರಾಕರಣೆ…
ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಉತ್ತರಾಖಂಡದಲ್ಲೂ ಪಬ್ಲಿಕ್ ಸರ್ವಿಸ್ ಪರೀಕ್ಷೆಯ ಪೇಪರ್ ಸೋರಿಕೆ ಪ್ರಕರಣವೊಂದು ವರದಿಯಾಗಿತ್ತು. ಇದಾದ ಬಳಿಕ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರೀಕ್ಷೆಯಲ್ಲಿ ನಕಲು ತಡೆಯಲು ಕಟ್ಟು ನಿಟ್ಟಿನ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಪೇಪರ್ ಸೋರಿಕೆ ಮತ್ತು ನಕಲು ಘಟನೆಗಳನ್ನು ತಡೆಗಟ್ಟುವ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಕಚೇರಿ ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯ ನೇಮಕಾತಿ ಪರೀಕ್ಷೆಗಳಲ್ಲಿ ನಕಲು ಮಾಡುವ ಅಭ್ಯರ್ಥಿಗಳು 10 ವರ್ಷಗಳವರೆಗೆ ಯಾವುದೇ ಸರ್ಕಾರಿ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿ ನಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸಿಎಂಒ ಪ್ರಕಾರ, ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುವ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟಪಡಿಸಿದ್ದಾರೆ. ನಕಲು ತಡೆ ಕಾನೂನಿನಲ್ಲಿ ಸರ್ಕಾರ ಈ ನಿಬಂಧನೆಯನ್ನು ತರಲು ಮುಂದಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸರ್ಕಾರ ಪೇಪರ್ ಸೋರಿಕೆ ಪ್ರಕರಣಗಳಿಂದಾಗಿ ಸರ್ಕಾರ ಸಾಕಷ್ಟು ತೊಂದರೆಯನ್ನ ಎದುರಿಸುತ್ತಿದೆ. ಕಟ್ಟುನಿಟ್ಟಿನ ಕಾನೂನು ಜಾರಿಯಿಂದ ಅಭ್ಯರ್ಥಿಗಳಲ್ಲಿ ಭಯ ಉಂಟಾಗಿ ಮೋಸ ಮಾಡುವುದು ತಪ್ಪಲಿದೆ ಎನ್ನವುದು ಇದರ ಉದ್ದೇಶ.
Uttarakhand : Denial of permission for 10 years examination for copying in recruitment exam…