ಬೆಂಗಳೂರು : ನಗರದ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್ ಸಂಖ್ಯೆ 106ರ ವ್ಯಾಪ್ತಿಯಲ್ಲಿ ಅಂದಾಜು 12 ಕೋಟಿ ವೆಚ್ಚದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತದೆ.
ಈ ಶಾಲಾ ಕಟ್ಟಡದ ಒಟ್ಟು ವಿಸ್ತೀರ್ಣ ಸುಮಾರು 6105.00 ಚದರ ಮೀಟರ್ ಇದ್ದು, ತಳಮಹಡಿಯಲ್ಲಿ ಪ್ರಾಂಶುಪಾಲರ ಕಚೇರಿ, 4 ಕ್ಲಾಸ್ ರೂಮ್, ಪುರಷ ಮತ್ತು ಮಹಿಳಾ ಶೌಚಾಲಯ, ಸ್ಟೋರ್ ರೂಮ್, ಸ್ಟಾಪ್ ರೂಮ್, ಆಡಳಿತ ಕಚೇರಿ ಇರುತ್ತದೆ.
ಮೊದಲ ಮಹಡಿಯಲ್ಲಿ ಸ್ಟೋರ್ ರೂಮ್, ಸ್ಟಾಪ್ ರೂಮ್, ಶೌಚಾಲಯಗಳು, ಲೈಬ್ರರಿ, ಕಂಪ್ಯೂಟರ್ ಲ್ಯಾಬ್. ಎರಡನೇ ಮಹಡಿಯಲ್ಲಿ 3 ಕ್ಲಾಸ್ ರೂಮ್, ಕೆಮಿಸ್ಟ್ರಿ ಲ್ಯಾಬ್, ಫಿಜಿಕ್ಸ್ ಲ್ಯಾಬ್, ಬಯಾಲಜಿ ಲ್ಯಾಬ್. ಮೂರನೇ ಮಹಡಿಯಲ್ಲಿ ಸ್ಟಾಪ್ ರೂಮ್, ಕಂಪ್ಯೂಟರ್ ಲ್ಯಾಬ್, 3 ಕ್ಲಾಸ್ ರೂಮ್, ಬಯಾಲಜಿ ಲ್ಯಾಬ್. ನಾಲ್ಕನೇ ಮಹಡಿಯಲ್ಲಿ ಎ ವಿ ಹಾಲ್, ಕೆಮಿಸ್ಟ್ರಿ ಲ್ಯಾಬ್, ಫಿಜಿಕ್ಸ್ ಲ್ಯಾಬ್, ಆರ್ಟ್ ರೂಮ್, ಸ್ಟೋರ್ ರೂಮ್ ಗಳಿರಳಿವೆ.
ಇದೆ ಕಟ್ಟಡದಲ್ಲಿ ಪ್ರತ್ಯೇಕವಾಗಿ 600 ಚದರ ಮೀಟರ್ ನಲ್ಲಿ ನರ್ಸರಿ ತರಗತಿ ಗಳ ಕಟ್ಟಡವಿರಲಿದೆ.
ಈ ಭೂಮಿಪೂಜೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಅ. ದೇವೇಗೌಡರು, ಬಿಬಿಎಂಪಿ ಸದಸ್ಯರಾದ ರೂಪ .ಆರ್, ವಾಗೀಶ್, ಮೋಹನ್ ಕುಮಾರ್, ಇಲಾಖೆಗಳ ಅಧಿಕಾರಿಗಳು ಭಾವಹಿಸಿದ್ದರು.
ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಭೂಮಿಪೂಜೆ pic.twitter.com/bmsdw4uW24
— Saakshatv-videos (@Saakshatv_video) September 9, 2020