ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಮಂತ್ರಿ ಆಗಿರ್ಲಿಲ್ಲ : ಸೋಮಣ್ಣ
ಬೆಂಗಳೂರು : ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಇನ್ನೂ ಮಂತ್ರಿ ಆಗಿರ್ಲಿಲ್ಲ, ಕೆಲವೊಂದು ವೇಳೆ ಕೆಲವು ವಿಚಾರ ಹೇಳಬೇಕಾಗುತ್ತದೆ. ಹೇಳಿದೀನಿ ಅಷ್ಟೇ. ಅಶೋಕ್ ಜತೆ ವೈಮನಸ್ಯ ಇಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಂಕಷ್ಟ ಇನ್ನೂ ಮುಗಿದಿಲ್ಲ. ಕೋವಿಡ್ ಮೂರನೇ ಅಲೆ ಬಾಯ್ತೆರೆದು ಮಹಾ ಬಲಿಗಾಗಿ ಕಾಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಜನರ ಬದುಕನ್ನು ಕಿತ್ತುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕೆಸಲ ಮಾಡಬೇಕಿದ್ದ ಸರ್ಕಾರ, ಕಣ್ಣು ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಹೊತ್ತಲ್ಲದ ಹೊತ್ತಲ್ಲಿ ಸಿಎಂ ಬದಲಾಗಿದ್ದು, ಶಾಸಕರು ಸಚವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ತಮ್ಮ ತಮ್ಮ ಕಿತ್ತಾಡುತ್ತಿದ್ದಾರೆ.
ಅದರಲ್ಲೂ ಬಿಜೆಪಿಯಲ್ಲಿ ಹಿರಿಯರು ಎನಿಸಿಕೊಂಡಿರುವ ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಮಧ್ಯೆ ಜಟಾಪಟಿ ನಡೆದಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿ ಸೋಮಣ್ಣ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಇನ್ನೂ ಮಂತ್ರಿ ಆಗಿರ್ಲಿಲ್ಲ, ಕೆಲವೊಂದು ವೇಳೆ ಕೆಲವು ವಿಚಾರ ಹೇಳಬೇಕಾಗುತ್ತದೆ. ಹೇಳಿದೀನಿ ಅಷ್ಟೇ. ಅಶೋಕ್ ಜತೆ ವೈಮನಸ್ಯ ಇಲ್ಲ. ನಾನು ರಾಜಕಾರಣ ಶುರು ಮಾಡಿ ಐವತ್ತು ವರ್ಷ ಆಯ್ತು, ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಜವಾಬ್ದಾರಿ ಕೊಟ್ರೆ ನಿಭಾಯಿಸ್ತೇನೆ. ಅಧಿಕಾರ ಕೊಡೋದು ಸಿಎಂ, ವರಿಷ್ಠರ ಪರಮಾಧಿಕಾರವಾಗಿದೆ. ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಬಿಜೆಪಿಗೆ ಬಂದು 12 ವರ್ಷ ಆಗಿದೆ. ನಾನು ದೆಹಲಿಗೆ ಹೋಗಲ್ಲ, ಅದರ ಅಗತ್ಯ ಇಲ್ಲ, ಮಂತ್ರಿಯಾದ ಮೇಲೆ ಒಂದೇ ಸಲ ದೆಹಲಿಗೆ ಹೋಗಿದ್ದು, ಅಶೋಕ್ ಜತೆ ಇದ್ದ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಮಾತಾಡಿದೀನಿ. ಅಶೋಕ್ ಜತೆ ವೈಮನಸ್ಸು ತಿಳಿಯಾಗಿದೆ. ನಮ್ಮ ಮಧ್ಯೆ ಯಾವುದು ಜಳಗವಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.