‘ದೇಶದಲ್ಲಿ ರೋಗಿಗಳ ಕೊರತೆ ಇದ್ದರೆ ಜಾಹೀರಾತು ನೀಡಿ ಲಸಿಕೆ ಪಡೆಯಲು ಆಹ್ವಾನಿಸಿ’
ನವದೆಹಲಿ : ದೇಶದಲ್ಲಿ ರೋಗಿಗಳ ಕೊರತೆ ಇದ್ದರೆ ಜಾಹೀರಾತು ನೀಡಿ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ಕೇಂದ್ರ ಸರ್ಕಾರದ ವಿರುದ್ಧ ವ್ಯಾಂಗ್ಯವಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು , ಲಸಿಕೆ ಮತ್ತು ಔಷಧಿ ಕೊರತೆ ಇಲ್ಲ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ಅವರ ಮಾತನ್ನು ನಂಬೋಣ. ಬಹುಶಃ ರೋಗಿಗಳ ಕೊರತೆ ಇರಬಹುದು. ಅದಕ್ಕಾಗಿ ಜಾಹೀರಾತು ಕೊಟ್ಟು ಚಿಕತ್ಸೆ ಪಡೆದುಕೊಳ್ಳಲು ರೋಗಿಗಳಿಗೆ ಮನವಿ ಮಾಡಿ ಎಂದಿದ್ದಾರೆ.
ಅಲ್ಲದೇ ಲಸಿಕೆ ಕೊರತೆ ಇಲ್ಲ ಎಂದಾದ ಮೇಲೆ ಅದನ್ನು ಹಾಕಿಸಿಕೊಳ್ಳುವವರ ಕೊರತೆ ಇರಬಹುದು. ಅದಕ್ಕಾಗಿ ಅರ್ಜಿ ಆಹ್ವಾನ ಮಾಡಿ, ಜಾಹೀರಾತು ನೀಡಿ ಎಂದು ತರಾಟೆಗೆ ಲೇವಡಿ ಮಾಡಿದ್ದಾರೆ.
ಇದೇ ವೇಳೆ ರೈಲ್ವೆ ನಿಲ್ದಾಣಗಳಲ್ಲಿ ಜನ ಗುಂಪು ಗೂಡುತ್ತಿಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ನಾವು ಟಿವಿಗಳಲ್ಲಿ ಜನ ಉದ್ದುದ್ದ ಸಾಲು ಗಟ್ಟಿರುವುದನ್ನು ನೋಡಿದ್ದೇವೆ. ಬಹುಶಃ ಅವರು ರೈಲ್ವೆ ನಿಲ್ದಾಣದ ಭದ್ರತೆಗೆ ರೈಲ್ವೆ ಪೊಲೀಸರಿಗೆ ಸಹಾಯ ಮಾಡಲು ಹೋಗಿರಬಹುದೆಂದು ಮತ್ತೊಂದು ಟ್ವಿಟ್ನಲ್ಲಿ ವ್ಯಂಗ್ಯವಾಡಿದ್ದಾರೆ.
ಸರ್ಕಾರ ಚುನಾವಣೆ ನಡೆಸಲು ಹೆಚ್ಚು ಆಸಕ್ತಿ ತೋರಿಸಿದೆ. ವೈದ್ಯಕೀಯ ದುರಂತಗಳಿಗೆ ಬಿಜೆಪಿ ಏಕಮಾತ್ರ ಹೊಣೆಯಾಗಬೇಕಾಗಿದೆ. ಆರೋಗ್ಯ ವ್ಯವಸ್ಥೆ ಕುಸಿದುಹೋಗುತ್ತಿದ್ದರೂ ಚುನಾವಣೆಯಲ್ಲೇ ಸಮಯ ವ್ಯರ್ಥ ಮಾಡಿದ ಬಿಜೆಪಿಗೆ ಪಶ್ಚಿಮ ಬಂಗಾಳದ ಜನತೆ 6ನೇ ಹಾಗೂ 7ನೇ ಹಂತದ ಮತದಾನದಲ್ಲಿ ಪಾಠ ಕಲಿಸಬೇಕೆಂದು ಮನವಿ ಮಾಡಿದ್ದಾರೆ.