ಮೈಸೂರು: ಕಳೆದ 4-5 ದಿನಗಳಿಂದ ಕೇರಳದ ವೈನಾಡು, ಕಾವೇರಿ ಕೊಳ್ಳ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ವರುಣ ಇದೀಗ ಕೊಂಚ ಶಾಂತನಾಗಿದ್ದು, ಕಬಿನಿ ಪ್ರವಾಹದ ಮಟ್ಟವೂ ಸ್ವಲ್ಪಮಟ್ಟಿಗೆ ತಗ್ಗಿದೆ. ಕಬಿನಿಗೆ ಒಳ ಹರಿವಿನ ಪ್ರಮಾಣ 60 ಸಾವಿರಕ್ಕೆ ಇಳಿಕೆಯಾಗಿದೆ. ಇನ್ನೂ ಪ್ರವಾಹದಲ್ಲಿ ದಕ್ಷಿಣ ಕಾಶಿ ನಂಜನಗೂಡು ಜಲ ದಿಗ್ಭಂಧನದಲ್ಲಿ ಸಿಲುಕಿತ್ತು. ಇದೀಗ ಪ್ರವಾಹ ಕಡಿಮೆಯಾಗುತ್ತಿದೆ. ಇನ್ನೂ ಮೈಸೂರು-ನಂಜನಗೂಡು ಹೆದ್ದಾರಿ, ಮಲ್ಲನಮೂಲೆ ಕ್ರಾಸ್ ಬಳಿಯೂ ಪ್ರವಾಹ ತಗ್ಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಸಂಚಾರ ಬಂದ್ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








