ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಚೆಕ್ ಗಣರಾಜ್ಯದ ಕಂಪೆನಿಗಳಿಂದ ಕರ್ನಾಟಕ ಸರ್ಕಾರಕ್ಕೆ ಅತ್ಯಾಧುನಿಕ 70 ಕೊರೊವೆಂಟ್ ವೆಂಟಿಲೇಟರ್ ಗಳ ಕೊಡುಗೆ

1 min read
dr sudhakar bengaluru saakshatv

ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಚೆಕ್ ಗಣರಾಜ್ಯದ ಕಂಪೆನಿಗಳಿಂದ ಕರ್ನಾಟಕ ಸರ್ಕಾರಕ್ಕೆ ಅತ್ಯಾಧುನಿಕ 70 ಕೊರೊವೆಂಟ್ ವೆಂಟಿಲೇಟರ್ ಗಳ ಕೊಡುಗೆ

dr sudhakar bengaluru saakshatvಬೆಂಗಳೂರು,  ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗಲು ಚೆಕ್ ಗಣರಾಜ್ಯದ ಕಂಪೆನಿಗಳು ಬೆಂಗಳೂರಿನ ಪುಷ್ಪಕ್ ಪ್ರಾಡೆಕ್ಟ್ಸ್ ಇಂಡಿಯಾ ಪ್ರಾಡೆಕ್ಸ್ಟ್ ಪ್ರವೈಟ್ ಲಿಮಿಟೆಡ್ ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ಚೆಕ್ ಗಣರಾಜ್ಯದ ಗೌರವ ರಾಯಭಾರಿ ಕಚೇರಿ ಅತ್ಯಾಧುನಿಕ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದೆ.

ಐದು ಕೋಟಿ ರೂಪಾಯಿ ಮೊತ್ತದ ವೆಂಟಿಲೇಟರ್ ಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ. ಮೊದಲ ಹಂತದಲ್ಲಿ 46 ವೆಂಟಿಲೇಟರ್ ಗಳು ಬಂದಿದ್ದು, ಇವುಗಳನ್ನು ಬುಧವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್ ಅವರು ಸ್ವೀಕರಿಸಿದರು.

ವೆಂಟಿಲೇಟರ್ಸ್ ಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಪುಷ್ಪಕ್ ಪ್ರಕಾಶ್, ವೆಂಟಿಲೇಟರ್ಸ್ ಗಳ ಸಾಗಾಣೆ, ಇತರೆ ಅಗತ್ಯತೆಗಳು ಸೇರಿ ಸಂಪೂರ್ಣ ವೆಚ್ಚವನ್ನು ಚೆಕ್ ಗಣರಾಜ್ಯದ ಕಂಪೆನಿಗಳೇ ಭರಿಸುತ್ತಿವೆ ಎಂದರು.

dr sudhakar bengaluru saakshatvಉಳಿದ 24 ವೆಂಟಿಲೇಟರ್ಸ್ ಗಳು ಆದಷ್ಟು ಶೀಘ್ರ ಬರಲಿವೆ. ಇವುಗಳನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಶೀರ್ಘದಲ್ಲೇ ಹಸ್ತಾಂತರಿಸಲಾಗುವುದು. ಭಾರತ – ಚೆಕ್ ಗಣರಾಜ್ಯದ ನಡುವೆ ಉತ್ತಮ ಬಾಂಧವ್ಯವಿದ್ದು, ಇದು ನಿರಂತರವಾಗಿ ಮುಂದುವರೆಯುತ್ತದೆ. ಆದಷ್ಟು ಶೀಘ್ರ ಭಾರತ ಕೋವಿಡ್ -19 ಸೋಂಕಿನಿಂದ ಮುಕ್ತವಾಗುತ್ತದೆ ಎಂಬ ವಿಶ್ವಾಸವಿರುವುದಾಗಿ ಪುಷ್ಪಕ್ ಪ್ರಕಾಶ್ ಆಶಯ ವ್ಯಕ್ತಪಡಿಸಿದರು.

ಈ ಎಲ್ಲಾ ಕಾರ್ಯಕ್ಕೆ ತುಂಬು ಹೃದಯದಿಂದ ಸಹಕರಿಸಿದ
ಡಾ. ಸೆಲ್ವಕುಮಾರ್ ಮತ್ತು ಅವರ ತಂಡ, ರುವಂಡಾದ ಗೌರವಾನ್ವಿತ ರಾಯಭಾರಿ ಮೋಹನ್ ಸುರೇಶ್, ಪೆರುವಿನ ಗೌರವಾನ್ವಿತ ರಾಯಭಾರಿ ವಿಕ್ರಂ ವಿಶ್ವನಾಥ್, ರೋಟರಿ ನಿರ್ದೇಶಕ ಡಾ.ಕಿರಣ್ ಕುಮಾರ್ ಅವರಿಗೆ ಆಭಾರಿಯಾಗಿದ್ದು, ಎಲ್ಲರಿಗೂ ವಿಶೇಷ ಧನ್ಯವಾದಗಳು ಎಂದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd