ನಟಿ ಕಾಜೋಲ್ (Kajol)ಅವರ ಡೀಪ್‍ಫೇಕ್ ವಿಡಿಯೋ ವೈರಲ್ ಆಗುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ (Katrina) ಈ ಡೀಪ್ ಫೇಕ್ ವಿಡಿಯೋ ಸುಳಿಗೆ ಸಿಲುಕಿದ್ದರು. ಈಗ ಈ ಸಾಲಿಗೆ ಹಿರಿಯ ನಟಿ ಸಿಲುಕಿದ್ದಾರೆ. ಇದನ್ನು ಕಂಡು ಟಿ ಗರಂ ಆಗಿದ್ದಾರೆ. ಕೂಡಲೇ ಈ ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇಂತಹ ವಿಡಿಯೋಗಳು ಹೆಚ್ಚಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿ ನಟಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಇಂತಹ ವಿಡಿಯೋ ಮತ್ತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‍ಫೇಕ್ (Deepfake) ವೀಡಿಯೋಗೆ ಸಂಬಂಧಿಸಿದಂತೆ ದೆಹಲಿ (Delhi) ಪೊಲೀಸರು (Police) ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಈಗ ಈ ವಿಚಾರವಾಗಿ ಪೊಲೀಸರು ಮತ್ತಷ್ಟು ಎಚ್ಚೆತ್ತುಕೊಂಡು ಅಲರ್ಟ್ ಆಗಿದ್ದಾರೆ.