ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪುಣ್ಯಸ್ಮರಣೆ : ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಗೌರವ ನಮನ
ನವದೆಹಲಿ: ಇಂದು ಕೇಂದ್ರದ ಮಾಜಿ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಅವರ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಅನೇಕ ಗಣ್ಯರು , ಬಿಜೆಪಿ ನಾಯಕರು ಸುಷ್ಮಾ ಸ್ವರಾಜ್ ಅವರಿಗೆ ಗೌರವ ಸೂಚಿಸುತ್ತಿದ್ದಾರೆ.. ಅದ್ರಂತೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ, ಸುಷ್ಮಾ ಅವರು ರಾಷ್ಟ್ರಕ್ಕೆ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುತ್ತೇವೆ ಎಂದು ಹೇಳಿದ್ದಾರೆ.
ಇಂದು ಪ್ರೀತಿಯ ಸಹೋದರಿ ಸುಷ್ಮಾ ಸ್ವರಾಜ್ ಅವರ ಪುಣ್ಯ ಸ್ಮರಣೆ. ಅವರೊಬ್ಬ ಅತ್ಯುತ್ತಮ ಸಂಸದೀಯ ಪಟು ಮತ್ತು ಉತ್ತಮ ವಾಗ್ಮಿ. ಮಹಿಳೆಯರು ಮತ್ತು ದೀನ ದಲಿತರ ವರ್ಗದ ಸಬಲೀಕರಣಕ್ಕಾಗಿ ಅಹರ್ನಿಶವಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂದು ವೆಂಕಯ್ಯನಾಯ್ಡು ಅವರು ಟ್ವೀಟ್ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳ ಜನರ ಬಗ್ಗೆಯೂ ಸಹಾನಭೂತಿ ಹೊಂದಿದ್ದ, ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದ ಧೀಮಂತ ನಾಯಕಿ ಸುಷ್ಮಾ ಸ್ವರಾಜ್. ಅವರ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.








