ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಕಾಂಬಿನೇಷನ್ ನ್ನು ಅಭಿಮಾನಿಗಳು ತುಂಬಾ ಇಷ್ಟ ಪಡುತ್ತಾರೆ. ಈ ಜೋಡಿಯ ಚಿತ್ರ ಮೂಡಿ ಬಂದರೆ, ಜನರು ಮುಗಿ ಬಿದ್ದು ನೋಡುತ್ತಾರೆ. ಸದ್ಯ ಇಬ್ಬರ ಬಗ್ಗೆ ಮತ್ತೊಂದು ಗಾಸಿಪ್ ಹೊರ ಬಿದ್ದಿದೆ.
ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಸಿನಿಮಾ ಮಾಡ್ತಾರೆ ಎಂದು ಗಾಸಿಪ್ ಹಬ್ಬಿತ್ತು. ಹೀಗಾಗಿ ಈ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸ್ಕ್ರೀಪ್ಟ್ ಸಿಕ್ಕರೆ ಖಂಡಿತವಾಗಿಯೂ ಜೊತೆಯಾಗಿ ಕೆಲಸ ಮಾಡುತ್ತೇವೆ. ನಾನು, ವಿಜಯ್ ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದೇವೆ ಎಂದು ರಶ್ಮಿಕಾ ಹೇಳಿದ್ದಾರೆ.
ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರದ ಮೂಲಕ ಇಬ್ಬರೂ ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಕೆಮಿಸ್ಟ್ರಿ ಕಂಡು ಜನರು ಇಬ್ಬರ ಮಧ್ಯೆ ಲವ್ ಇದೆ ಎಂದು ಕೂಡ ಮಾತನಾಡಿಕೊಂಡಿದ್ದಾರೆ. ಆದರೆ, ಯಾವ ಚಿತ್ರದಲ್ಲಿ ಮುಂದೆ ಇವರು ನಟಿಸುತ್ತಾರೆ ಎಂಬುವುದು ಮಾತ್ರ ಇದುವರೆಗೂ ತಿಳಿದಿಲ್ಲ.