Vijayanagara | ಮದುವೆ ಆರತಕ್ಷತೆ ವೇಳೆಯೇ ವರನ ದುರ್ಮರಣ
ವಿಜಯನಗರ : ಮದುವೆ ಆರತಕ್ಷತೆ ವೇಳೆಯೇ ವರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಹೊನ್ನೂರ ಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ.

ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥಗೊಂಡ ಹೊನ್ನೂರಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ವರ ಹೊನ್ನೂರಸ್ವಾಮಿ ಕೊನೆಯುಸಿರೆಳೆದಿದ್ದಾರೆ.








