ವಿಜಯಪುರ: ಬಿ.ವೈ. ವಿಜಯೇಂದ್ರ ನನ್ನ ವಿರುದ್ಧ ಬೀದಿ ನಾಯಿ ಹಾಗೂ ಹಂದಿಗಳನ್ನು ಬಿಟ್ಟಿದ್ದಾನೆ ಎಂದು ಸಾಸಕ ಬಸನಗೌಡ ಯತ್ನಾಳ್ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಮಾತನಾಡಲೆಂದೇ ಕೆಲವು ಹಂದಿ, ಬೀದಿನಾಯಿಗಳು ಬಿಟ್ಟಿದ್ದಾನೆ. ಹಂದಿ, ಬೀದಿ ನಾಯಿಗಳ ಬಗ್ಗೆ ಕೇಳಬೇಡಿ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಗುಡುಗಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿಯಾಗದಿರುವ ಕುರಿಚು ಸಾಕಷ್ಟು ಚರ್ಚೆಯಾಗಿದೆ. ಆದಿಲ್‍ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದ್ದಾರೆ.