ರಾಜ್ಯದ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್‌ಗಳನ್ನು ನೀಡುತ್ತಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲು ಹಾಗೂ ಕೆಲವು ದಿನಸಿ ವಸ್ತುಗಳು GST ವ್ಯಾಪ್ತಿಗೆ ಬರುತ್ತಿಲ್ಲ. ಆದರೂ ಈ ರೀತಿಯ ವಸ್ತುಗಳನ್ನು ಮಾರಾಟ ಮಾಡುವವರಿಗೂ 18% GST ಪಾವತಿಗೆ ನೋಟಿಸ್‌ಗಳು ಬಂದಿವೆ. ಇದು ತೀವ್ರ ಗೊಂದಲಕ್ಕೆ ಕಾರಣವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
GST ವ್ಯವಸ್ಥೆಯಲ್ಲಿ ಮೂರು ತರದ ಫ್ಲ್ಯಾಬ್‌ಗಳಿವೆ. ಯಾವ ವ್ಯಾಪಾರಿಯದ್ದು ಯಾವ ಶ್ರೇಣಿಗೆ ಸೇರುತ್ತದೆ ಎಂಬುದನ್ನು ಪರೀಕ್ಷಿಸದೇ, ಯಾವುದೇ ಪರಿಶೀಲನೆಯಿಲ್ಲದೇ ನೇರವಾಗಿ ನೋಟಿಸ್ ನೀಡಲಾಗುತ್ತಿದೆ. ಖಜಾನೆ ಖಾಲಿಯಾಗಿದೆ ಎಂಬ ಕಾರಣಕ್ಕೆ ಜನರ ಮೇಲೆ ತೆರಿಗೆ ಬಾಧೆ ಹೇರಬಾರದು ಎಂದು ಅವರು ಎಚ್ಚರಿಸಿದರು.
ಅವರು ರಾಜ್ಯ ಸರ್ಕಾರವನ್ನು ಖಡಕ್ ಆಗಿ ಟೀಕಿಸಿ, ಈ ರೀತಿಯ ನಿರ್ಧಾರದಿಂದಾಗಿ ಸಣ್ಣ ವ್ಯಾಪಾರಿಗಳು ತಮ್ಮ ಬಿಸಿನೆಸ್ ಮುಚ್ಚುವ ಪರಿಸ್ಥಿತಿಗೆ ನೂಕಲ್ಪಡುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಈ ನೋಟಿಸ್ ನೀತಿಯಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ವ್ಯಾಪಾರಿಗಳು ಬೀದಿಗಿಳಿಯುವಂತಾಗುತ್ತದೆ ಎಂದು ಹೇಳಿದರು.








