Vikranth Rona : ರಾ..ರಾ..ರಕ್ಕಮ್ಮದಲ್ಲಿ ಕಿಚ್ಚನ ಮಸ್ತ್ ಮಸ್ತ್ ಸ್ಟೆಪ್ಸ್ , ಕಿಕ್ಕೇರಿಸುವ ಹಾಡಿಗೆ ನೆಟಿಜನ್ಸ್ ಫಿದಾ..!!
ಭಾರತದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ವಿಕ್ರಾಂತ್ ರೋಣ , ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದ್ದು ಸುಮಾರು 8 ಕ್ಕೂ ಅಧಿಕ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.. ಈ ಸಿನಿಮಾದ ರಾರಾ ರಕ್ಕಮ್ಮ ಹಾಡು ಈಗ ರಿಲೀಸ್ ಆಗಿ ಭಾರೀ ಸೌಂಡ್ ಮಾಡ್ತಿದೆ..
ಯೂಟ್ಯೂಬ್ ನಲ್ಲಿ ಹಾಡು ಫೈಯರ್ ಹೆಚ್ಚಿಸಿದೆ.. ಕಿಚ್ಚ ಸುದೀಪ್ ಅಂತೂ ರಕ್ಕಮ್ಮ ರಕ್ಕಮ್ಮ ಎಂದೇ ಸಖತ್ ಸ್ಟೆಪ್ಸ್ ಹಾಕಿದ್ದಾರೆ..
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಸಿಂಗಲ್ ಲಿರಿಕಲ್ ವಿಡಿಯೋ ಸಾಂಗ್ ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಇಂದು ರಿಲೀಸ್ ಆಗಿದೆ. ಕನ್ನಡ ಹಾಡಿನಲ್ಲಿ ಕೆಲ ತುಳು ಪದಗಳನ್ನು ಬಳಸಿಕೊಂಡು ಈ ಹಾಡನ್ನ ತಯಾರಿಸಲಾಗಿರೋದು ಮತ್ತಷ್ಟು ಗಮನ ಸೆಳೆಯುತ್ತದೆ..
ಕಿಚ್ಚ ಸುದೀಪ್ ಅವರು ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ..
ಸುನಿಧಿ ಚೌವ್ಹಾನ್ ಮತ್ತು ನಕಾಶ್ ಈ ಹಾಡಿಗೆ ದನಿಯಾಗಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಅನೂಪ್ ಭಂಡಾರಿ ಅವರೇ ಸಾಹಿತ್ಯ ಬರೆದಿರುವುದು ವಿಶೇಷ..
ಸಿನಿಮಾ ಜುಲೈ 28 ಕ್ಕೆ ಥಿಯೇಟರ್ ಗಳಿಗೆ ಅಪ್ಪಳಿಸಲಿದ್ದು , KGF 2 ನಂತರ ವಿಕ್ರಾಂತ್ ರೋಣನ ಅಬ್ಬರ ಭರ್ಜರಿಯಾಗಿರಲಿದೆ.. ಅದ್ರಲ್ಲೂ ಇದೊಂದು 3ಡಿ ಸಿನಿಮಾವಾಗಿದ್ದು ಫ್ಯಾಂಟಸಿ ಆಗಿರೋದ್ರಿಂದ ಈ ಸಿನಿಮಾ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ..
ಅಂದ್ಹಾಗೆ ಸಿನಿಮಾ ತಂಡ ಬಿಡುಗಡೆ ಮಾಡಿದ ಮೊದಲ ಹಾಡು ಇದಾಗಿದೆ.. ಇದಕ್ಕೂ ಮೊದಲು ಟೀಸರ್ ಹಾಗೂ ಗ್ಲಿಂಪ್ಸ್ ಮೂಲಕವೇ ಸಿನಿಮಾ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿತ್ತು..
ಮೊದಲಿಗೆ ಹಾಡು ಕನ್ನಡದಲ್ಲಿ ಬಿಡುಗಡೆ ಆಗಿದೆ.. ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ರಿಲೀಸ್ ಹಾಡು ರಿಲೀಸ್ ಆಗಿಲಿದೆ..
ಹಿಂದಿಯಲ್ಲಿ ಮೇ 24 ಮಧ್ಯಾಹ್ನ 01.05 ಕ್ಕೆ ಹಾಡು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಡು ಬಿಡುಗಡೆಯಾಗುತ್ತದೆ. ಮೇ 27 ರಂದು ಮಲಯಾಳಂನಲ್ಲಿ 01.05ಕ್ಕೆ ಈ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ.