ವಿಶ್ವ ಕುಸ್ತಿ ಚಾಂಪಿಯನ್ ಶಿಪ್ – ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್…
ಸರ್ಬಿಯಾದಲ್ಲಿ (ಬೆಲ್ಗ್ರೇಡ್) ನಡೆಯುತ್ತಿರುವ ಚಾಂಪಿಯನ್ಶಿಪ್ನಲ್ಲಿ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಕಂಚಿನ ಪದಕ ಗೆದ್ದಿದ್ದಾರೆ. ಭಾರತಕ್ಕೆ ಇದು ಮೊದಲ ಪದಕವಾಗಿದೆ.
28ರ ಹರೆಯದ ಭಾರತದ ಕುಸ್ತಿಪಟು ವಿನೇಶ್ 53 ಕೆಜಿ ತೂಕ ವಿಭಾಗದ ರಿಪಿಚೇಜ್ ಪಂದ್ಯದಲ್ಲಿ ಸ್ವೀಡಿಷ್ ಕುಸ್ತಿಪಟು ಎಮ್ಮಾ ಜೊವಾನ್ನಾ ಮಾಲ್ಮ್ಗ್ರೆನ್ ಅವರನ್ನು 8-0 ಅಂತರದಿಂದ ಸೋಲಿಸಿದರು. ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ವಿನೇಶ್ಗೆ ಇದು ಎರಡನೇ ಪದಕವಾಗಿದೆ.
ಇದಕ್ಕೂ ಮೊದಲು ಅವರು ನೂರ್ ಸುಲ್ತಾನ್ನಲ್ಲಿ ನಡೆದ 2019 ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದರು. ಒಂದಕ್ಕಿಂತ ಹೆಚ್ಚು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಈ ಸಾಧನೆ ಮಾಡಿದ ಎರಡನೇ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿನೇಶ್ ಫೋಗಟ್ ಆಗಸ್ಟ್ ನಲ್ಲಿ ಅವರು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್-2022 ನಲ್ಲಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆದ್ದಿದ್ದರು.