ಬೆಂಗಳೂರಿನಲ್ಲಿ ವಿರಾಟ್ ಹವಾ..?
ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಹವಾ ಜೋರಾಗಿದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಆರ್ ಸಿಬಿ ಜೊತೆಗೆ ವಿರಾಟ್ ಎಂದು ಕೂಗುತ್ತಾ ಸಂಭ್ರಮಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಅಭಿಮಾನಿಗಳು ಆರ್ ಸಿಬಿ ಆರ್ ಸಿಬಿ ಎಂದು ಕೂಗಿದ್ದು, ವಿರಾಟ್ ಅದಕ್ಕೆ ಕೈಯಲ್ಲಿ ದಿಲ್ ಮಾರ್ಕ್ ತೋರಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯವಾಗಿ ಎರಡನೇ ದಿನದ ಟೆಸ್ಟ್ ಪಂದ್ಯದ ವೇಳೆ ನಾಲ್ವರು ಯುವಕರ ಪೊಲೀಸರು ಹಾಗೂ ಕ್ರೀಡಾಂಗಣದ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನದೊಳಗೆ ಪ್ರವೇಶ ಮಾಡಿ ಅವಾಂತರ ಸೃಷ್ಟಿಸಿದ್ದರು. ಅಲ್ಲದೇ ವಿರಾಟ್ ಕೊಹ್ಲಿ ಬಳಿ ತೆರಳಿ ಫೋಟೋಗಾಗಿ ಮುಗಿಬಿದ್ದಿದ್ದರು. ಇತ್ತ ಶಾಂತವಾಗಿಯೇ ಅಭಿಮಾನಿಗಳ ಮನವಿಗೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ಯುವಕರೊಂದಿಗೆ ಫೋಟೋಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಆ ಬಳಿಕ ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ಹಿಡಿದುಕೊಂಡು ಮೈದಾನದಿಂದ ಹೊರಗೆಳೆದು ತಂದಿದ್ದಾರೆ. ಸದ್ಯ ನಾಲ್ವರು ಯುವಕರ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.








