ನಿಮ್ಮ ಜೀವನದ ಕಥೆ ಹೇಳಿ… ದುಡ್ಡು ಸಿಗುತ್ತೆ… ಮನಸ್ಸು ಹಗುರಾಗುತ್ತೆ..!
ಕೆಲವೊಮ್ಮೆ ನಮ್ಮ ಜೀವನದ ಕಥೆ, ಬೇಸರು, ನೋವು , ಕಷ್ಟ ಸಂಕಷ್ಟಗಳನ್ನ ಯಾರ ಬಳಿಯೂ ಹೇಳಿಕೊಳ್ಳೋದಕ್ಕಾಗಲ್ಲ. ಹೇಳಿಕೊಳ್ಳೋಣ ಅಂದ್ರು ಕೇಳೋ ಮನಸ್ಥಿತಿ ತುಂಬ ಜಜನಕ್ಕೆ ಇರಲ್ಲ. ಆಡಿಕೊಳ್ತಾರೆ, ನಗ್ತಾರೆ ಅನ್ನೋ ಭಯಾನು ಇರುತ್ತೆ. ಆದ್ರೆ ಮಹಾರಾಷ್ಟ್ರದ ಪುಣೆಯ 22 ವರ್ಷದ ಯುವಕ ಜನರು ಸಂಕಷ್ಟ ಹೇಳಿಕೊಳ್ಳುವಂತೆ ಮುಕ್ತ ಆಹ್ವನ ನೀಡಿದ್ದಾನೆ. ಜೊತೆಗೆ ಕಥೆ ಹೇಳಿದೋರಿಗೆ 10 ರೂಪಾಯಿ ನೀಡೋದಾಗಿಯೂ ಹೇಳಿಕೊಂಡಿದ್ದಾರೆ. ಹೌದು ಇಂಜಿನಿಯರ್ ರಾಜ್ ದಾಗ್ವಾರ್ ಎಂಬಾತ ಜನರ ಮನದ ಮಾತನ್ನ ಕೇಳೋಕೆ ಮುಂದಾಗಿದ್ದಾರೆ.
ಲೈಟರ್ ತೋರಿಸಿ 79 ಸಾವಿರ ರೂಪಾಯಿ ದರೋಡೆ : ‘ಲೈಟರ್’ ಗೆ ಹೆದರಿದ್ರಾ ಚಾನ್ಸೇ ಇಲ್ಲ..!
ಫರ್ಗುಸನ್ ಕಾಲೇಜು ರಸ್ತೆಯ ಮುಂದೆ ನಿಮ್ಮ ಕತೆಯನ್ನ ಹೇಳಿ ನಾನು ನಿಮಗೆ 10 ರೂಪಾಯಿ ಕೊಡುತ್ತೇನೆ ಎಂಬ ಬೋರ್ಡ್ ಹಿಡಿದು ನಿಂತಿರೋ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈಗಾಗಲೇ ಅನೇಕರು ಆತನ ಬಳಿ ಕಥೆ ಹೇಳಿಕೊಂಡಿದ್ದಾರೆ. ಜನರ ಕತೆಯನ್ನ ಕೇಳಬೇಕು ಎಂಬ ಕಾರಣಕ್ಕೆ ಈ ಯುವಕ ನಿತ್ಯ ಕನಿಷ್ಟ 5 ಗಂಟೆ ಸಮಯವನ್ನ ಫುಟ್ಪಾತ್ ನಲ್ಲೇ ಕಳೆಯುತ್ತಿದ್ದಾನೆ. ಅಷ್ಟೇ ಅಲ್ಲ ತನಗೆ ಈವರೆಗೆ ಕತೆ ಹೇಳಿದ ಪ್ರತಿಯೊಬ್ಬರ ಹೆಸರನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದಾನೆ.
‘PUBG’ ಪ್ರಿಯರಿಗೆ ನಿರಾಸೆಯಾಗಬಹುದು: ಗಮನಿಸಲೇ ಬೇಕಾದ ಸುದ್ದಿ!
ಇನ್ನೂ ಈತ ಹೇಳಿಕೊಳ್ಳೋ ಪ್ರಕಾರ, ಈತ ಉತ್ತಮ ಕೇಳುಗ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಸ್ಯೆಗಳಿವೆ. ಲಾಕ್ಡೌನ್ನಿಂದಾಗಿ ಅನೇಕರು ಒಂಟಿತನವನ್ನ ಅನುಭವಿಸುತ್ತಿದ್ದಾರೆ. ಅನೇಕರಿಗೆ ತಮ್ಮ ಭಾವನೆಯನ್ನ ಹೊರಗೆ ಹಾಕಿಕೊಳ್ಳಲು ಯಾರೂ ಸಿಗ್ತಿಲ್ಲ. ಇದರಿಂದ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ. ಅದೇನೆ ಇರಲಿ ಪಕ್ಕದ ಮನೆಯಲ್ಲಿರೋರಿಗೆ ಏನಾದ್ರೆ ನಮಗೇನ್ ಆಗಬೇಕಿದೆ ಅಂತ ಜನರು ಅಂದ್ಕೊಂಡು ತಮ್ಮ ಪಾಡಿಗೆ ತಾವಿರೋ ಈ ಕಾಲದಲ್ಲಿ ಈ ಯುವಕನ ವಿಚಾರ ಲಹರಿ ನಿಜಕ್ಕೂ ಶ್ಲಾಘನೀಯವೇ ಸರಿ..
ಮಧ್ಯಪ್ರದೇಶ | ರಾತ್ರೋರಾತ್ರಿ ಲಕ್ಷಾಧಿಪತಿಯಾದ ಕೃಷಿಕ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel