ಮದುವೆಯಾಗಬೇಕಿದ್ದವಳು ಆಸ್ಪತ್ರೆ ಸೇರಿದ್ದಳು.. ಆಸ್ಪತ್ರೆಯಲ್ಲೇ ವಧು ಕೈ ಕಿಹಿಡಿದ ವರ..!
ಉತ್ತರಪ್ರದೇಶ: ರೀಲ್ ಲೈಫ್ ಗೂ ರಿಯಲ್ ಲೈಫ್ ಗೂ ಅಜಗಜಾಂತರ ವ್ಯತ್ಯಾಸವಿರುತ್ತೆ. ಯಾವಾಗಲೂ ಸಿನಿಮಾದಲ್ಲಿ ನಡೆಯೋದೆಲ್ಲಾ ಕೇವಲ ಡುಪು. ಅದು ನಿಜ ಜೀವನದಲ್ಲಿ ನಡೆಯೋದಿಲ್ಲ. ಆದ್ರೆ ಕೆಲವೊಮದು ಘಟನೆಗಳು ಈ ಮಾತನ್ನು ಸುಳ್ಳು ಮಾಡಿವೆ. ಅದರಂತೆ ಉತ್ತರಪ್ರದೇಶದಲ್ಲೂ ನಡೆದ ಈ ಘಟನೆ ಎಲ್ಲರನ್ನ ಅಚ್ಚರಿಗೀಡು ಮಾಡಿದೆ. ಅಂದ್ಹಾಗೆ ಬಾಲಿವುಡ್ ನ ಖ್ಯಾತ ‘ವಿವಾಹ್ ‘ ದ ಮಾದರಿಯಲ್ಲೇ ವರನೋರ್ವ ಆಸ್ಪತ್ರೆಯಲ್ಲಿದ್ದ ವಧುವಿಗೆ ತಾಳಿ ಕಟ್ಟಿ ಮಾದರಿಯಾಗಿದ್ದಾರೆ.
ಅಂದ್ಹಾಗೆ ‘ವಿವಾಹ್ ‘ ಚಿತ್ರದಲ್ಲಿ ತಂಗಿಯ ಜೀವ ಉಳಿಸಲು ಹೋಗಿ ಬೆಂಕಿ ಅವಘಡದಲ್ಲಿ ಸಿಲುಕಿ ನಾಯಕಿ ಆಸ್ಪತ್ರೆ ಸೇರುತ್ತಾಳೆ. ಆದ್ರೆ ವರ ಆಕೆಯನ್ನೇ ಕೈಹಿಡಿಯುತ್ತಾನೆ. ಅದರಂತೆಯೇ ನಿಜ ಜೀವನದಲ್ಲೂ ವ್ಯಕ್ತಿಯೋರ್ವ ಇಂತಹದ್ದೇ ರೀತಿಯ ಘಟನೆಗೆ ಸಾಕ್ಷಿಯಾಗಿ ಶ್ಲಾಘನೆಗೆ ಪಾತ್ರವಾಗಿದ್ದಾನೆ.
ಹಿಂದು ಯುವತಿ ಅಪಹರಣ.. ಬಲವಂತದ ಮತಾಂತರ… ಆರೋಪಿ ಅಂದರ್..!
ಅಂದ್ಹಾಗೆ ಪ್ರಯಾಗ್ರಾಜ್ ನ ಆರತಿ ಎಂಬಾಕೆ ಜೊತೆಗೆ ಅವಧೇಶ್ ಎಂಬ ಯುವಕನ ಮದುವೆ ನಿಶ್ಚಯವಾಗಿತ್ತು. ಡಿಸೆಂಬರ್ 8ರ ಸಂಜೆ ವಧು ವರರಿಬ್ಬರು ಹಸೆ ಮಣೆ ಏರಬೇಕಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮನೆಯ ಮೇಲ್ಛಾವಣಿಯಲ್ಲಿ ಮೂರು ವರ್ಷದ ಮಗುವೊಂದು ಇನ್ನೇನು ಮಾಡಿ ಮೇಲಿಂದ ಆಯತಪ್ಪಿ ಬೀಳುತಿತ್ತು. ಆದ್ರೆ ಅಷ್ಟರಲ್ಲೇ ಆ ಮಗುವನ್ನ ಬಚಾವ್ ಮಾಡಿದ ಮಧುಮಗಳು ಖುದ್ದು ಟೆರೆಸ್ ನಿಂದ ಕೆಳಗೆ ಬಿದ್ದಿದ್ದಾಳೆ. ಘಟನೆಯಲ್ಲಿ ಆಕೆಯ ಬೆನ್ನು ಮೂಳೆ ಮುರಿದಿದ್ದು, ಕಾಲುಗಳೆರೆಡು ಸ್ವಾಧೀನ ಕಳೆದುಕೊಂಡಿದೆ. ತಕ್ಷಣ ಆರತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ವಧುವಿನ ತಂಗಿ ಜೊತೆಗೆ ಮದುವೆ ಮಾಡಿಕೊಳ್ಲುವಂತೆ ಹೆಣ್ಣಿನ ಕಡೆಯವರು ವರನಿಗೆ ಕೇಳಿಕೊಂಡಿದ್ದಾರೆ. ಆದ್ರೆ ಆತ ಇದಕ್ಕೆ ಒಪ್ಪದೇ ಆಸ್ಪತ್ರೆಯ ಬೆಡ್ ಮೇಲೆಯೇ ಆರತಿ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಆಕೆಯ ಆರೈಕೆ ಮಾಡಿದ್ದಾನೆ.
`ಪ್ರಶಾಂತ್ ನೀಲ್ ಕಥೆ’ಯಲ್ಲಿ `ಬಘೀರನಾದ ಶ್ರೀಮುರಳಿ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel