Viral Video: ಪಾನ್ ಅಂಗಡಿಯಿಂದ ಲೈಟ್ ಬಲ್ಬ ಕದ್ದ ಇನ್‌ಸ್ಪೆಕ್ಟರ್…
ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಮಧ್ಯರಾತ್ರಿಯಲ್ಲಿ ಪಾನ್ ಅಂಗಡಿಯಿಂದ ಲೈಟ್ ಬಲ್ಬ್ ಕಳ್ಳತನ ಮಾಡುತ್ತಿರುವ ವಿಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಯಾಗ್‌ರಾಜ್‌ನ ಫುಲ್‌ಪುರ್ ಪ್ರದೇಶದ ಪಾನ್ ಅಂಗಡಿಯಿಂದ ಅಕ್ಟೋಬರ್ 6 ರಂದು ನಡೆದಿದ್ದ ಕಳ್ಳತನದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್ ಆದ ನಂತರ ಫುಲ್‌ಪುರ್ ಕೊತ್ವಾಲಿಯಲ್ಲಿ ನಿಯೋಜನೆಗೊಂಡಿದ್ದ ಇನ್ಸ್‌ಪೆಕ್ಟರ್ ರಾಜೇಶ್ ವರ್ಮಾ ಅವರನ್ನು SSP ಅಮಾನತುಗೊಳಿಸಿದ್ದಾರೆ. ವೀಡಿಯೊದಲ್ಲಿ, ಇನ್ಸ್‌ಪೆಕ್ಟರ್ ಪಾನ್ ಅಂಗಡಿಯತ್ತ ಸಮೀಪಿಸಿ ಅಂಗಡಿಯ ಹೊರಗಿದ್ದ ಎಲ್‌ಇಡಿ ಬಲ್ಬನ್ನ ಕ್ಷಣಮಾತ್ರದಲ್ಲಿ ತೆಗೆದು ಜೇಬಿಗೆ ಹಾಕಿಕೊಂಡು ಹೊರಡುವುದನ್ನ ನೋಡಬಹುದು.
Uttar Pradesh: Policeman steals LED bulb, caught on CCTV camera #UttarPradesh #LED #WATCH #UPPolice #ViralVideo #वायरल #Prayagraj #cctv pic.twitter.com/WEtp86Lbt2
— Harish Deshmukh (@DeshmukhHarish9) October 15, 2022
ದಸರಾ ಮೇಳದ ರಾತ್ರಿ ಪೊಲೀಸರು ರಾತ್ರಿ ಕರ್ತವ್ಯದಲ್ಲಿದ್ದರು. ಮರುದಿನ ಬೆಳಿಗ್ಗೆ ಬಲ್ಬ್ ಕಾಣೆಯಾಗಿರುವುದನ್ನು ಗಮನಿಸಿದ ಅಂಗಡಿಯವನು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳ ಇನ್ಸ್‌ಪೆಕ್ಟರ್ ಎಂದು ತಿಳಿದು ಬೆಚ್ಚಿಬಿದ್ದಿದ್ದಾನೆ.
ಅಮಾನತುಗೊಂಡಿರುವ ಪೊಲೀಸರು ಹೇಳುವ ಪ್ರಕಾರ ತಾನು ಇದ್ದ ಜಾಗ ಕತ್ತಲಾಗಿದ್ದರಿಂದ ಅಲ್ಲಿದ್ದ ಬಲ್ಬ ತೆಗೆದು ತಾನಿದ್ದ ಪ್ರದೇಶಕ್ಕೆ ಹಾಕಿಕೊಂಡಿದ್ದಾಗಿ ಹೇಳಿದ್ದಾರೆ. ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
Viral Video: UP Inspector Caught on CCTV Stealing Light Bulb From Paan Shop in Prayagraj. Watch