virat kohli
242ನೇ ಇನ್ನಿಂಗ್ಸ್ 12 ಸಾವಿರ ರನ್ : ಕಿಂಗ್ ಕೊಹ್ಲಿ ಅಲ್ಲ.. ಕಿಂಗ್ ಆಫ್ ರೆಕಾರ್ಡ್ಸ್
ಕೊಹ್ಲಿ ಕ್ರಿಕೆಟ್ ದೇವರಲ್ಲ.. ಆದ್ರೂ ಯಾರಿಗೇನು ಕಮ್ಮಿ ಅಲ್ಲ..
ಅಂದು ಸಚಿನ್ ಜಮಾನ… ಇಂದು ವಿರಾಟ್ ಜಮಾನ..
ಟೆಸ್ಟ್.. ಟಿ-20.. ಏಕದಿನ… ಎಲ್ಲಾ ಮಾದರಿಗೂ ವಿರಾಟ್ ಯಜಮಾನ
ಹೌದು..! ಅದೊಂದು ಕಾಲ ಇತ್ತು.. ಆಗ ಆ ಒಬ್ಬ ಆಟಗಾರನಿಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದರು. ಆ ಮೋಡಿಗಾರನ ಮನಮೋಹಕ ಆಟವನ್ನ ಕಣ್ತುಂಬಿಕೊಳ್ಳೋಕೆ ಜನ ಮಹಾಸಾಗರವೇ ಮೈದಾನಕ್ಕೆ ಹರಿದು ಬರುತ್ತಿತ್ತು.
ಕ್ರಿಕೆಟ್ ಆಟವನ್ನೇ ಉಸಿರಾಗಿಸಿಕೊಂಡಿದ್ದ ಆ ಮಹಾನ್ ಆಟಗಾರ ಹಾಕಿದ ಪ್ರತಿ ಹೆಜ್ಜೆಯೂ ಒಂದು ಮೈಲುಗಲ್ಲಾಗುತ್ತಿತ್ತು. ವಿಶ್ವ ಕ್ರಿಕೆಟ್ ಜಗತ್ತು ಆತನಿಗೆ ಕ್ರಿಕೆಟ್ ದೇವರು ಎಂದು ಪಟ್ಟಿಕಟ್ಟಿತ್ತು. ಕ್ರಿಕೆಟ್ ಪ್ರಿಯರು ಆ ದೇವರ ಭಕ್ತರಾದ್ರು..
ಇನ್ನು ಕ್ರಿಕೆಟ್ ದೇವರ ನರ್ತನಕ್ಕೆ ಲೆಕ್ಕವಿಲ್ಲದಷ್ಟು ದಾಖಲೆಗಳು ಇತಿಹಾಸದ ಪುಟ ಸೇರಿವೆ. ಆ ದಾಖಲೆಗಳ ಹತ್ತಿರಕ್ಕೂ ಬೇರ್ಯಾವ ಆಟಗಾರನೂ ಬರೋಕೆ ಸಾಧ್ಯವಿಲ್ಲ.. ಕ್ರಿಕೆಟ್ ಮೈದಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಬರೆದಿರುವ ದಾಖಲೆಗಳು ದಾಖಲೆಗಳಾಗಿಯೇ ಉಳಿಯಲಿವೆ ಅಂತ ಎಲ್ಲಾರು ಅಂದುಕೊಂಡಿದ್ರು..
ಆದ್ರೆ ಕಾಲ ಬದಲಾದಂತೆ.. ಹೊಸ ಆಟಗಾರರು ವಿಶ್ವ ಕ್ರಿಕೆಟ್ ನಲ್ಲಿ ಮಿಂಚಲು ಶುರು ಮಾಡಿದ್ರು. ಕ್ರಿಕೆಟ್ ದುನಿಯಾದಲ್ಲಿ ಹೊಸ ಪ್ರತಿಭೆಗಳ ಆಟ ಶುರುವಾಯ್ತು.. ಈ ಮಧ್ಯೆ ಸಚಿನ್ ಆಟವನ್ನ ನೋಡಿಕೊಂಡು ಬಂದ ಒಬ್ಬ ಯುವ ಆಟಗಾರ ಟೀಂ ಇಂಡಿಯಾದ ಗರ್ಭಗುಡಿಯನ್ನ ಪ್ರವೇಶಿಸಿದ.. ಆತ ಸಚಿನ್ ಜೊತೇಲಿ ಬ್ಯಾಟ್ ಬೀಸಿದ.. ಸಚಿನ್ ಜೊತೇಲಿ ಸೆಂಚೂರಿ ಬಾರಿಸಿದ.. ಮುಂದೆ ಆ ಯುವ ಆಟಗಾರ ಮತ್ತೊಬ್ಬ ಸಚಿನ್ ಆದ.. ಟೀಂ ಇಂಡಿಯಾ ಪಾಲಿನ ಕ್ರಿಕೆಟ್ ಬ್ರಹ್ಮನಾದ… ವಿಶ್ವ ಕ್ರಿಕೆಟ್ ನ ಕಿಂಗ್ ಆದ.. ಕ್ರಿಕೆಟ್ ರಾಕ್ಷಸನಾದ..! 
ಸೆಲೆಬ್ರಿಟಿಗಳ ಮಾಲ್ಡೀವ್ಸ್ ಪ್ರವಾಸದ ಗುಟ್ಟೇನು..! ಫ್ರೀ ಟಿಕೆಟ್, ಫ್ರೀ ಊಟ, ಮಸ್ತ್ ಮಸ್ತ್ ಫೋಟೋಸ್..!
ಎಸ್..! ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರಂತೂ ಅಲ್ಲ.. ಸಚಿನ್ ಗೂ ವಿರಾಟ್ ಗೂ ಹೋಲಿಕೆನೂ ಇಲ್ಲ.. ಆದ್ರೆ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಗಿಂತ ಕಮ್ಮಿ ಏನಲ್ಲ.. ಸಚಿನ್ ಆಟದಲ್ಲಿ ಗಜರಾಜ ಗಾಂಭೀರ್ಯತೆ ಎಂದು ಕಾಣುತ್ತೆ.. ವಿರಾಟ್ ಆಟದಲ್ಲಿ ಮೃಗರಾಜನ ಘರ್ಜನೆ ಕೇಳಿಸುತ್ತೆ. ಹೀಗಾಗಿ ವಿರಾಟ್ ಕೊಹ್ಲಿ ಸಚಿನ್ ರ ಒಂದೊಂದು ದಾಖಲೆಗಳನ್ನು ಧೂಳಿಪಟ ಮಾಡುತ್ತ ಸಾಗುತ್ತಿದ್ದಾರೆ.
ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 22 ಸಾವಿರ ರನ್ ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ, ಈಗ ಮತ್ತೊಂದು ಸಾಧನೆಯ ಶಿಖರವೇರಿದ್ದಾರೆ. ಆಸ್ಟ್ರೆಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 23 ರನ್ ಮಾಡಿದ ಕೊಹ್ಲಿ, ಏಕದಿನ ಕ್ರಿಕೆಟ್‍ನಲ್ಲಿ 12 ಸಾವಿರ ರನ್ ಪೂರೈಸಿದರು. ಜತೆಗೆ ಅತೀ ವೇಗದಲ್ಲಿ ಈ ಸಾಧನೆಗೈದ ದಾಖಲೆಗೂ ಪಾತ್ರರಾದರು.
‘ಮೋಸ್ಟ್ ವೈಲೆಂಟ್ ಮೆನ್’ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ..!
ಈ ಪಂದ್ಯಕ್ಕೂ ಮುನ್ನ 250 ಪಂದ್ಯಗಳನ್ನಾಡಿರುವ ಕೊಹ್ಲಿ 241 ಇನ್ನಿಂಗ್ಸ್‍ಗಳಿಂದ 11,977 ರನ್ ಬಾರಿಸಿದ್ದರು. ಮೂರನೇ ಪಂದ್ಯದಲ್ಲಿ ಉಳಿದ 23 ರನ್ ಬಾರಿಸಿದ ಕೊಹ್ಲಿ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಸಚಿನ್ ತೆಂಡುಲ್ಕರ್ 309ನೇ ಪಂದ್ಯದ 300ನೇ ಇನ್ನಿಂಗ್ಸ್‍ನಲ್ಲಿ 12 ಸಾವಿರ ರನ್ ಪೂರ್ತಿಗೊಳಿಸಿದ್ದರು. ಇದು 12 ಸಾವಿರ ರನ್ನುಗಳ ಅತೀ ವೇಗದ ದಾಖಲೆಯಾಗಿದೆ. ಆದ್ರೆ ಕೊಹ್ಲಿ ಇದನ್ನು 50ಕ್ಕೂ ಹೆಚ್ಚು ಪಂದ್ಯಗಳಷ್ಟು ಬೇಗ ಪೂರೈಸಿದ್ದಾರೆ. ವಿರಾಟ್ 242 ಇನ್ನಿಂಗ್ಸ್ ನಲ್ಲೇ ಈ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಈ ರೀತಿ 12,000 ರನ್ ಗಡಿ ದಾಟಿದ ಆರನೇ ಕ್ರಿಕೆಟಿಗ ಎಂಬ ಕೀರ್ತಿಗೂ ವಿರಾಟ್ ಭಾಜನರಾಗಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನದಲ್ಲಿದ್ರೆ ಕುಮಾರ ಸಂಗಕ್ಕಾರ, ರಿಕ್ಕಿ ಪಾಂಟಿಂಗ್ , ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ ನಂತರದ ಸ್ಥಾನಗಳಲ್ಲಿದ್ದಾರೆ.
virat kohli
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








