Virat Kohli : ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಫ್ಯಾನ್
ಭಾರತ –ಶ್ರೀಲಂಕಾ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮೈದಾನದ ಒಳಗೆ ನುಗ್ಗಿ ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ಗ್ರೀನ್ ಫೀಲ್ಡ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಭಾರತ 317 ರನ್ಗಳ ಗೆಲುವು ಪಡೆದು ಸರಣಿ ಕ್ಲೀನ್ ಸ್ವೀಪ್ ಮಾಡಿತು. ಟೀಮ್ ಇಂಡಿಯಾ ಫೀಲ್ಡಿಂಗ್ ಮಾಡುವ ವೇಳೆ ಅಭಿಮಾನಿಯೊಬ್ಬ ಮೈದಾನದೊಳಗೆ ನುಗ್ಗಿ ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದಿದ್ದಾನೆ.
ಈ ಅಭಿಮಾನಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಭದ್ರತಾ ಸಿಬ್ಬಂದಿ ಕೂಡ ಅಭಿಮಾನಿಯನ್ನು ಹಿಡಿಯಲು ಪ್ರಯತ್ನಿಸಿದರು. ಟೀಮ್ ಇಂಡಿಯಾ ಆಟಗಾರರು ಒಂದು ಕ್ಷಣ ಗಾಬರಿಯಾದರು.
ವಿರಾಟ್ ಕೊಹ್ಲಿ ಅಭಿಮಾನಿ ಬಳಿ ಸಮಾಧಾನದಿಂದ ಮಾತನಾಡಿದರು. ನಂತರ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅಭಿಮಾನಿ ವಿರಾಟ್ ಕೊಹ್ಲಿ ಜೊತೆಗಿರುವ ಫೋಟವನ್ನು ತಗೆದರು.
ಈ ಪಂದ್ಯದಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ 13 ಬೌಂಡರಿ 8 ಸಿಕ್ಸರ್ ಸಿಡಿಸಿ ಒಟ್ಟು ಅಜೇಯ 166 ರನ್ ಕಲೆ ಹಾಕಿದರು. 46ನೇ ಶತಕವನ್ನು ಪೂರೈಸಿದರು. ಟೂರ್ನಿಯಲ್ಲಿ 2 ಶತಕ ಸಿಡಿಸಿದ ವಿರಾಟ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Virat Kohli : A fan entered the field and fell on Kohli’s feet









