Virat kohli – ನನ್ನ ಫ್ಯಾನ್ಸ್ ಗೆ ನಾನು ಚಿರಋಣಿ
ಟಿ 20 ವಿಶ್ವಕಪ್ ಭಾಗವಾಗಿ ಮೆಲ್ ಬರ್ನ್ ವೇದಿಕೆಯಾಗಿ ಪಾಕಿಸ್ತಾನ ವಿರುದ್ಧದ ನಡೆದ ಮ್ಯಾಚ್ ನಲ್ಲಿ ವಿರಾಟ್ ಕೊಹ್ಲಿ 82 ರನ್ ಗಳಿಸಿ ಭಾರತ ಕ್ರಿಕೆಟ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಈ ವಾತಾವರಣ ಅದ್ಭುತವಾಗಿದೆ, ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ.
ಇದೆಲ್ಲಾ ಹೇಗೆ ನಡೆಯುತ್ತದೆ ಅಂತಾ ಐಡಿಯಾ ಇಲ್ಲ. ನಿಜವಾಗಿಯೂ ಮಾತುಗಳು ಬರುತ್ತಿಲ್ಲ. ಪಂದ್ಯದ ಕೊನೆಯವರೆಗೂ ಇಬ್ಬರೂ ಕ್ರೀಸ್ ನಲ್ಲಿ ನಿಂತರೇ ಗೆಲುವು ಸಾಧಿಸಬಹುದು ಎಂದು ಹಾರ್ದಿಕ್ ಪಾಂಡ್ಯ ಬಲವಾಗಿ ನಂಬಿದ್ದ.
ಷಾಹಿನ್ ಆಫ್ರಿದಿ ಪೆವಿಲಿಯನ್ ಎಂಡ್ ನಿಂದ ಬೌಲಿಂಗ್ ಗೆ ಬರುತ್ತಿದ್ದಂತೆ ಆ ಓವರ್ ನಲ್ಲಿ ರನ್ ಗಳಿಸಬೇಕೆಂದು ಡಿಸೈಡ್ ಆಗಿದ್ವಿ.
ಹಾರಿಸ್ ರೌಫ್ ಪಾಕಿಸ್ತಾನ ತಂಡದ ಪ್ರಧಾನ ಬೌಲರ್. ಆತನ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಗಳನ್ನು ಸಿಡಿಸಿದರು.

ಸ್ಪಿನ್ನರ್ ನವಾಜ್ ಅವರ ಇನ್ನೊಂದು ಓವರ್ ಬಾಕಿ ಇದೆ ಅಂತಾ ನನಗೆ ಗೊತ್ತು. ಅದಕ್ಕೆ ಸಿಂಪಲ್ ಕ್ಯಾಲ್ಕುಲೇಷನ್ ಹಾರಿಸ್ ಬೌಲಿಂಗ್ ನಲ್ಲಿ ಅಟ್ಯಾಕ್ ಮಾಡಿದ್ರೆ ಪಾಕ್ ಟೀಂ ಭಯಪಡುತ್ತದೆ ಎಂದು ಅಂದುಕೊಂಡ್ವಿ.
ಕೊನೆಯ 8 ಎಸೆತಗಳಲ್ಲಿ 28 ರನ್ ಗಳ ಅವಶ್ಯಕತೆ ಇದ್ದಾಗ ಎರಡು ಸಿಕ್ಸರ್ ಗಳೊಂದಿಗೆ ಆರು ಎಸೆತಗಳಲ್ಲಿ 16 ರನ್ ಬೇಕಾಯಿತು. ನಾನು ಎಂದಿನಂತೆ ಆಡಿದ್ದೇನೆ.
ಇಲ್ಲಿವರೆಗೂ ಮೊಹಾಲಿ ವೇದಿಕೆಯಾಗಿ ಆಸ್ಟ್ರೆಲಿಯಾ ವಿರುದ್ಧ ನಡೆದ ಮ್ಯಾಚ್ ನನ್ನ ಕೆರಿಯರ್ ಬೆಸ್ಟ್. ಆದ್ರೆ ಇಂದು ಪಾಕಿಸ್ತಾನ್ ವಿರುದ್ಧ ನಡೆದ ಪಂದ್ಯ ಅದಕ್ಕಿಂತ ಹೆಚ್ಚು.
ಹಾರ್ದಿಕ್ ನನ್ನನ್ನು ಪದೇ ಪದೇ ಪ್ರೋತ್ಸಾಹಿಸುತ್ತಿದ್ದರು. ಕ್ರೌಡ್ ನಿಂದ ಬಂದ ಅಧ್ಬುತ. ನನ್ನ ಫ್ಯಾನ್ಸ್ ಪ್ರತಿಬಾರಿ ನನ್ನ ಬೆಂಬಲವಾಗಿದ್ದರು. ಅವರಿಗೆ ನಾನು ಚಿರಋಣಿ ಎಂದಿದ್ದಾರೆ ವಿರಾಟ್ ಕೊಹ್ಲಿ.








