Rohit sharma | ರೋಹಿತ್ ಬೇಡ.. ವಿರಾಟ್ ಇನ್ನಿಂಗ್ಸ್ ಆರಂಭಿಸಲಿ
ಮೊಹಾಲಿ ವೇದಿಕೆಯಾಗಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದೊಂದಿಗೆ ಟೀಂ ಇಂಡಿಯಾ ಸೋಲು ಕಂಡಿದೆ.
ಇದರೊಂದಿಗೆ ಮೂರು ಪಂದ್ಯದ ಸರಣಿಯಲ್ಲಿ 0 – 1 ಅಂತರದೊಂದಿಗೆ ಭಾರತ ಹಿನ್ನೆಡೆಯಲ್ಲಿದೆ.
ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ, ಬೌಲಿಂಗ್, ಫೀಲ್ಡಿಂಗ್ ನಲ್ಲಿ ದಾರುಣವಾಗಿ ವಿಫಲವಾಗಿ ಸೋಲನುಭವಿಸಬೇಕಾಯಿತು.
ಅದೇ ರೀತಿ ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ನಿರಾಸೆ ಮೂಡಿಸಿದರು.
ಹೀಗಾಗಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಟೀಂ ಇಂಡಿಯಾ ನಾಗಪೂರ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಮಾಜಿ ಆಟಗಾರ ಡಾನಿಷ್ ಕನೆರಿಯಾ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಬ್ಯಾಟಿಂಗ್ ಆರ್ಡರ್ ನಲ್ಲಿ ರೋಹಿತ್ ಶರ್ಮಾ, ಕೊಹ್ಲಿ ಕ್ರಮಾಂಕವನ್ನು ಬದಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ರೋಹಿತ್ ಶರ್ಮಾ ಓಪನರ್ ಆಗಿ ವಿಫಲವಾಗುತ್ತಿದ್ದಾರೆ. ಏಷ್ಯಾಕಪ್ ನಲ್ಲಿ ರೋಹಿತ್ ತೀವ್ರ ನಿರಾಸೆ ಮೂಡಿಸಿದರು.
ಇನ್ನು ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ.
ಹೀಗಾಗಿ ರಾಹುಲ್ ಜೋಡಿಯಾಗಿ ವಿರಾಟ್ ಕೊಹ್ಲಿ ಅವರನ್ನು ಕಳುಹಿಸಬೇಕು.
ರೋಹಿತ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಡಾನೀಷ ಕನೆರಿಯಾ ಅಭಿಪ್ರಾಯಪಟ್ಟಿದ್ದಾರೆ.