ಅಯ್ಯಯ್ಯೋ ಇದೆಂಥಾ ಅವಮಾನ…! ಖದರ್ ಕಳೆದುಕೊಳ್ತಿದ್ದಾರಾ ಕಿಂಗ್ ಕೊಹ್ಲಿ..?
ನವದೆಹಲಿ : ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ನಲ್ಲಿ ಟೀಂ ಇಂಡಿಯಾ ಮಣ್ಣುಮುಕ್ಕಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಮೇಲೆ ಮಾಜಿ ಕ್ರಿಕೆಟರ್ ಗಳು ಮುಗಿಬಿದ್ದಿದ್ದಾರೆ. ತಮ್ಮ ಅತ್ಯುತ್ತಮ ಡಬ್ಲ್ಯೂಟಿಸಿ ತಂಡದಲ್ಲಿ ಕನಿಷ್ಠ ಸ್ಥಾನ ನೀಡದೇ ಟೀಮ್ ಇಂಡಿಯಾ ರನ್ ಕೊಹ್ಲಿಯನ್ನ ಅವಮಾನಿಸುತ್ತಿದ್ದಾರೆ.
ಹೌದು..! ಈ ಹಿಂದೆ ಮಾಜಿ ಕ್ರಿಕೆಟಿಗ ಮತ್ತು ನಿರೂಪಕ ಆಕಾಶ್ ಚೋಪ್ರಾ, ತಮ್ಮ ಕನಸಿನ ತಂಡದಲ್ಲಿ ಕೊಹ್ಲಿಗೆ ಸ್ಥಾನ ನಿರಾಕರಿಸಿದ್ದರು. ಇದರ ಬೆನ್ನಲ್ಲೆ ಇದೀಗ ಆಸೀಸ್ ಮಾಜಿ ಆಟಗಾರ, ಚೈನಾಮೆನ್ ಬೌಲರ್ ಬ್ರಾಡ್ ಹಾಗ್, ಕೊಹ್ಲಿ ತಮ್ಮ ಅತ್ಯುತ್ತಮ ತಂಡದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗ್ ತಮ್ಮ ತಂಡದಲ್ಲಿ ನಾಲ್ಕು ಭಾರತೀಯ ಆಟಗಾರರಿಗೆ ಅವಕಾಶ ನೀಡಿದ್ದು, ಆಶ್ಚರ್ಯಕರವಾಗಿ ಕೊಹ್ಲಿ ಹೊರಗಿಟ್ಟಿದ್ದಾರೆ.
ಇನ್ನು ಹಾಗ್ ತಮ್ಮ ತಂಡದ ಆರಂಭಿಕರನ್ನಾಗಿ ಟೀಮ್ ಇಂಡಿಯಾ ಸ್ಟಾರ್ ಓಪನರ್ ರೋಹಿತ್ ಶರ್ಮಾ, ಶ್ರೀಲಂಕಾದ ದಿಮುತ್ ಕರುಣರತ್ನೆ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಒನ್ ಡೌನ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಅವಕಾಶ ನೀಡಿರುವ ಹಾಗ್, ಅವರನ್ನು ತಂಡದ ನಾಯಕನ್ನಾಗಿಸಿದ್ದಾರೆ. ಇನ್ನು ನಾಲ್ಕನೇ ಶ್ರೇಯಾಂಕದಲ್ಲಿ ಸ್ಟೀವ್ ಸ್ಮಿತ್ ಇದ್ದರೇ ಐದನೇ ಸ್ಥಾನದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಇದ್ದಾರೆ. ಆಲ್ ರೌಂಡರ್ ಕೋಟಾದಲ್ಲಿ ಬೆನ್ ಸ್ಟೋಕ್ಸ್ಗೆ ಆರನೇ ಸ್ಥಾನದ್ದು, ವಿಕೆಟ್ ಕೀಪರ್-ಬ್ಯಾಟ್ಸ್‍ಮನ್ ಕೋಟಾದಲ್ಲಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ. ಏಳನೇ ಸ್ಥಾನಕ್ಕೆ ತಾನೇ ಸೂಕ್ತ ಆಟಗಾರ ಎಂದು ಹೇಳಿಕೊಂಡಿದ್ದಾರೆ.
ಇನ್ನು ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಇದ್ದರೇ, ವೇಗದ ವಿಭಾಗದಲ್ಲಿ ಕೈಲ್ ಜಾಮಿಸನ್, ಸ್ಟುವರ್ಟ್ ಬ್ರಾಡ್ ಮತ್ತು ಮೊಹಮ್ಮದ್ ಶಮಿ ಇದ್ದಾರೆ.
ಒಟ್ಟಾರೆ ವಿಶ್ವ ಶ್ರೇಷ್ಠ ಆಟಗಾರನಾಗಿರುವ ಕೊಹ್ಲಿಯನ್ನು ಇದೀಗ ಹಿರಿಯ ಕ್ರಿಕೆಟಿಗರು ಟೀಕೆ ಮಾಡುತ್ತಿದ್ದು, ಅವರನ್ನು ತಮ್ಮ ಡ್ರೀಮ್ ತಂಡದಿಂದ ಕೈಬಿಡುತ್ತಿದ್ದಾರೆ. ಇದು ಕಿಂಗ್ ಕೊಹ್ಲಿ ತಮ್ಮ ಖದರ್ ಕಳೆದುಕೊಂಡಿದ್ದಾರಾ ಅನ್ನೋ ಪ್ರಶ್ನೆಗೆ ಕಾರಣವಾಗಿದೆ.