ADVERTISEMENT
Monday, August 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾಯಕತ್ವದಿಂದ ವಿರಾಟ್ ಕೊಹ್ಲಿಯವರನ್ನು ಕೆಳಗಿಳಿಸಬೇಕಾ ? ಬೇಡ್ವಾ ?

Mahesh M Dhandu by Mahesh M Dhandu
December 1, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ನಾಯಕತ್ವದಿಂದ ವಿರಾಟ್ ಕೊಹ್ಲಿಯವರನ್ನು ಕೆಳಗಿಳಿಸಬೇಕಾ ? ಬೇಡ್ವಾ ?

Virat kohli
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಯಾರು ಏನು ಮಾತನಾಡುವ ಹಾಗಿಲ್ಲ. ಯಾಕಂದ್ರೆ ವಿಶ್ವ ಕ್ರಿಕೆಟ್ ನಲ್ಲಿ ಒಬ್ಬ ಬ್ಯಾಟ್ಸ್ ಮೆನ್ ಆಗಿ ವಿರಾಟ್ ಕೊಹ್ಲಿಯ ಹೆಜ್ಜೆ ಗುರುತುಗಳಿಗೆ ಆಧುನಿಕ ಕ್ರಿಕೆಟ್ ನಲ್ಲಿ ಯಾರು ಕೂಡ ಸರಿ ಸಾಟಿ ಇಲ್ಲ.

Related posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

August 31, 2026
ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

August 31, 2026

43 ಏಕದಿನ ಮತ್ತು 27 ಟೆಸ್ಟ್ ಶತಕಗಳನ್ನು ದಾಖಲಿಸಿರುವ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ಜಗತ್ತಿನ ರನ್ ಮೇಷಿನ್. ಅಷ್ಟೇ ಅಲ್ಲ ಚೇಸಿಂಗ್ ಗಾಡ್ ಅನ್ನೋ ಗೌರವವನ್ನು ಕೂಡ ಪಡೆದುಕೊಂಡಿದ್ದಾರೆ. ಎದುರಾಳಿ ಬೌಲರ್ ಗಳಿಗೆ ಸಿಂಹ ಸ್ವಪ್ನದಂತೆ ಕಾಡುವ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಬ್ಬರವನ್ನು ಬಣ್ಣಿಸಲು ಸಾಧ್ಯವಿಲ್ಲ.

Virat kohli
ಆದ್ರೆ ಈಗ ಪ್ರಶ್ನೆ ಎದ್ದಿರುವುದು ವಿರಾಟ್ ಕೊಹ್ಲಿಯ ನಾಯಕತ್ವ. ನಾಯಕನಾಗಿ ವಿರಾಟ್ ಕೊಹ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ಆದ್ರೆ ಒಬ್ಬ ಸಮರ್ಥ ನಾಯಕನಾಗಿ ವಿರಾಟ್ ಕೊಹ್ಲಿ ಐಸಿಸಿಯ ಮಹತ್ವದ ಟೂರ್ನಿಗಳನ್ನು ಗೆಲ್ಲಲು ವಿಫಲರಾಗಿದ್ದಾರೆ.

ಕೆಲವು ಕ್ರಿಕೆಟ್ ಪಂಡಿತರು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಯುಎಇ ನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ನಾಯಕನಾಗಿರುವ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು. ಅದೇ ರೀತಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಸೋತಿದ್ದಾರೆ.

ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಮೈದಾನದಲ್ಲಿ ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳನ್ನು ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದಾರೆ. ಅದ್ರಲ್ಲೂ ಗೌತಮ್ ಗಂಭೀರ್ ಮಾಡಿರುವ ತಪ್ಪುಗಳನ್ನು ಬೊಟ್ಟು ಮಾಡಿ ಹೇಳಿದ್ದಾರೆ.

ಟೀಮ್ ಇಂಡಿಯಾಗೆ ಕೈಕೊಡುತ್ತಿರುವ ರೆಟ್ರೋ ಬ್ಲೂ ಜೆರ್ಸಿಯ ಬಣ್ಣ..!

 ಅಷ್ಟಕ್ಕೂ ವಿರಾಟ್ ಕೊಹ್ಲಿಯವರಲ್ಲಿ ನಾಯಕತ್ವದ ಗುಣಗಳು ಇಲ್ಲವೋ ಅನ್ನೋ ಪ್ರಶ್ನೆಗೆ ಖಂಡಿತ ಉತ್ತರವಿದೆ. ಆಕ್ರಮಣಕಾರಿ ಪ್ರವೃತ್ತಿ, ಆಟಗಾರರನ್ನು ಹುರಿದುಂಬಿಸುವ ಗುಣ, ಎದುರಾಳಿ ತಂಡದ ಮಾತಿಗೆ ತಕ್ಕ ಉತ್ತರ ನೀಡುವ ಸಾಮಥ್ರ್ಯ, ನಾಯಕನಾಗಿ ಏಕಾಂಗಿಯಾಗಿ ಹೋರಾಡುವ ಛಲ, ಒತ್ತಡವನ್ನು ನಿಭಾಯಿಸುವ ಕಲೆ, ಗೆಲ್ಲಲೇಬೇಕು ಅನ್ನೋ ಹಠ ಹೀಗೆ ನಾಯಕನಾಗುವ ಎಲ್ಲಾ ಅರ್ಹತೆಗಳು ಕೂಡ ವಿರಾಟ್ ಕೊಹ್ಲಿಯಲ್ಲಿವೆ.

ಆದ್ರೆ ಮೈದಾನದಲ್ಲಿ ಎದುರಾಳಿ ತಂಡದ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಲು ವಿರಾಟ್ ಕೊಹ್ಲಿ ವಿಫಲರಾಗುತ್ತಿದ್ದಾರೆ. ಅದು ಐಪಿಎಲ್ ನಲ್ಲೂ ಅಷ್ಟೇ.. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅಷ್ಟೇ… ಸೂಕ್ತ ಸಮಯದಲ್ಲಿ ದಿಟ್ಟ ಪ್ರತಿತಂತ್ರ ರೂಪಿಸುವಲ್ಲಿ ವಿರಾಟ್ ಎಡುವುತ್ತಿದ್ದಾರೆ.

2019ರ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ನಾಯಕನಾಗಿ ಆಡಿರುವ 15 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಸೋತಿದ್ದಾರೆ. ಆರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಇನ್ನು ಕಳೆದ ಐದು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ಸೋತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 0-3ರಿಂದ ಸೋತ್ರೆ, ಸದ್ಯ ಆಸ್ಟ್ರೇಲಿಯಾ ಸರಣಿಯಲ್ಲಿ 0-2ರಿಂದ ಹಿಂದಿದ್ದಾರೆ.

ಅಂದ ಹಾಗೇ ಇಲ್ಲಿ ಇನ್ನೊಂದು ಪ್ರಶ್ನೆ ಮೂಡುತ್ತಿದೆ. ನಾಯಕನಾಗಿ ವಿರಾಟ್ ಕೊಹ್ಲಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಅನುಪಸ್ಥಿತಿ ಕಾಡುತ್ತಿದೆಯಾ ಅನ್ನೋದು.

Virat kohli

ಅಂಕಿ ಅಂಶಗಳ ಪ್ರಕಾರ ಹೌದು ಅನ್ನುತ್ತಿದೆ. ಯಾಕಂದ್ರೆ ಮಹೇಂದ್ರ ಸಿಂಗ್ ಧೋನಿ ಇರೋ ತನಕ ವಿರಾಟ್ ಕೊಹ್ಲಿಗೆ ಯಾವುದೇ ರೀತಿಯ ಒತ್ತಡವಿರಲಿಲ್ಲ. ವಿರಾಟ್ ನಾಯಕನಾಗಿದ್ರೂ ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ರಣ ತಂತ್ರ ರೂಪಿಸುತ್ತಿದ್ದದ್ದು ಮಹೇಂದ್ರ ಸಿಂಗ್ ಧೋನಿಯೇ ಎಂಬುದು ಯಾರಿಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ.

ಜಸ್ಪ್ರಿತ್ ಬೂಮ್ರಾ, ಶಮಿ ಅದ್ರಲ್ಲೂ ಚಾಹಲ್ ಮತ್ತು ಕುಲದೀಪ್ ಯಾದವ್ ಅವರಿಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಅನ್ನೋ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದು ಧೋನಿಯೇ. ಹೀಗಾಗಿ ವಿರಾಟ್ ಕೊಹ್ಲಿಗೆ ನಾಯಕನಾಗಿ ಹೆಚ್ಚಿನ ಒತ್ತಡವಿರಲಿಲ್ಲ.
ಇದೀಗ ಧೋನಿ ಇಲ್ಲ. ಇನ್ನೊಂದೆಡೆ ಉಪನಾಯಕನಾಗಿದ್ದ ರೋಹಿತ್ ಶರ್ಮಾನೂ ಇಲ್ಲ. ವಿರಾಟ್ ಕೊಹ್ಲಿ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ವಿರಾಟ್ ಕೊಹ್ಲಿಯ ಹಿನ್ನಡೆಗೆ ಕಾರಣವಾಗುತ್ತಿದೆ.

ವಿಶ್ವ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ರಾಕ್ಷಸ

ಈ ನಡುವೆ ವಿರಾಟ್ ಕೊಹ್ಲಿಯವರನ್ನು ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನ ನಾಯಕತ್ವದಿಂದ ಕೆಳಗಿಳಿಸಬೇಕು ಅನ್ನೋ ಕೂಗು ಕೂಡ ಕೇಳಿಬರುತ್ತಿದೆ.

ವಿರಾಟ್ ಬದಲು ರೋಹಿತ್ ಶರ್ಮಾಗೆ ನಾಯಕತ್ವದ ಪಟ್ಟ ನೀಡಬೇಕು ಅನ್ನೋ ಚರ್ಚೆಗಳು ಕೂಡ ಇವೆ. ಇದಕ್ಕೂ ಬಲವಾದ ಕಾರಣಗಳಿವೆ. ಯಾಕಂದ್ರೆ ರೋಹಿತ್ ಶರ್ಮಾ ನಾಯಕನಾಗಿ ನಿಭಾಯಿಸುವ ರೀತಿ. ಅದೇ ರೀತಿ ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ಪರಿಗೆ ಕ್ರಿಕೆಟ್ ಪಂಡಿತರು ಕೂಡ ಚಕಿತಗೊಂಡಿದ್ದಾರೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಧೋನಿಯ ನಾಯಕತ್ವಕ್ಕೆ ಹೋಲಿಕೆ ಮಾಡಲಾಗುತ್ತಿದೆ.

ಇನ್ನೊಂದು ಕಾರಣ ಅಂದ್ರೆ, ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ರೀತಿಗೆ ಭೇಷ್ ಅನ್ನುತ್ತಿದ್ದಾರೆ. ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿಯವರನ್ನೇ ಮೀರಿಸಿದ್ದಾರೆ. ಐದು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್‍ಪಟ್ಟಕ್ಕೇರಿಸಿದ್ದಾರೆ. ಅಲ್ಲದೆ 2020ರ ಐಪಿಎಲ್ ನಲ್ಲಿ ರೋಹಿತ್ ಶರ್ಮಾ 19 ಪಂದ್ಯಗಳಲ್ಲಿ 14 ಪಂದ್ಯಗಳನ್ನು ಗೆದ್ದಿದ್ದಾರೆ. ಐದು ಪಂದ್ಯಗಳನ್ನು ಮಾತ್ರ ಸೋತಿದ್ದಾರೆ.

ಮ್ಯಾಚ್ ಮಧ್ಯೆ ಆಸ್ಟ್ರೇಲಿಯಾ ಹುಡುಗಿಗೆ ಪ್ರಪೋಸ್

Virat kohli

ಅದೇ ರೀತಿ ನಾಯಕ ವಿರಾಟ್ ಕೊಹ್ಲಿಯವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಎಂಟು ಎಂಟು ಪಂದ್ಯಗಳನ್ನು ಮುನ್ನಡೆಸಿದ್ದು, ಆರು ಪಂದ್ಯಗಳಲ್ಲಿ ಜಯ ಮತ್ತು ಎರಡು ಪಂದ್ಯಗಳಲ್ಲಿ ಸೋತಿದ್ದಾರೆ.

ಹೀಗೆ ವಿರಾಟ್ ಕೊಹ್ಲಿಯ ನಾಯಕತ್ವದ ಪಟ್ಟ ಅಲುಗಾಡುತ್ತಿದೆ. ಹಾಗಂತ ಟೀಮ್ ಇಂಡಿಯಾದಲ್ಲಿ ಇದೇನೂ ಹೊಸತಲ್ಲ. ಸತತವಾಗಿ ಗೆಲುವು ದಾಖಲಿಸಿದಾಗ ನಾಯಕನನ್ನು ಅಟಕ್ಕೇರಿಸುವುದು, ಸೋತಾಗ ಪ್ರಪಾತಕ್ಕೆ ತಳ್ಳುವುದು ಹಳೆಯ ಜಾಯಮಾನ.
ಇದು ವಿರಾಟ್ ಕೊಹ್ಲಿಗೂ ಅನ್ವಯವಾಗುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: MS DhoniRohit Sharmavirat kohli
ShareTweetSendShare
Join us on:

Related Posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
August 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ...

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

by Shwetha
August 31, 2026
0

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ...

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಖಾಲಿ ಇರುವ ಕುರ್ಚಿಯನ್ನು ಅಲಂಕರಿಸಲು ಕಾಂಗ್ರೆಸ್ ಪಡಶಾಲೆಯಲ್ಲಿ...

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

by Shwetha
August 31, 2026
0

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕ ಪ್ರವಾಸದ ವೇಳೆ ಹಿಂದುತ್ವ ಮತ್ತು ಮುಸ್ಲಿಮರ ಕುರಿತು ಅತ್ಯಂತ ಮಹತ್ವದ ಹಾಗೂ ಸ್ಫೋಟಕ ಹೇಳಿಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram