Virat Kohli | ಪಾಕ್ ವಿರುದ್ಧದ ಪಂದ್ಯ.. ಸಚಿನ್ ದಾಖಲೆ ಬ್ರೇಕ್ ಮಾಡ್ತಾರಾ ವಿರಾಟ್
ಪ್ರಸ್ತುತ ಆಧುನಿಕ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ.
ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ವಿರಾಟ್ ಇಂದು ಪಾಕ್ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡುವ ಸಾಧ್ಯತೆಗಳಿವೆ.
ಐಸಿಸಿ ಟೂರ್ನಿಯಲ್ಲಿ ಕೊಹ್ಲಿ ಸಚಿನ್ ಅವರೊಂದಿಗೆ ಕೂಡಿ ಇಲ್ಲಿಯವರೆಗೂ 23 ಅರ್ಧಶತಕಗಳನ್ನು ಸಾಧಿಸಿದ್ದಾರೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಿಫ್ಟಿ ಬಾರಿಸಿದ್ರೆ ಸಚಿನ್ ದಾಖಲೆಯನ್ನು ಮುರಿಯಲಿದ್ದಾರೆ.
ಆ ಮೂಲಕ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಹಾಫ್ ಸೆಂಚೂರಿಗಳನ್ನು ಸಾಧಿಸಿದ ಟೀಂ ಇಂಡಿಯಾದ ಆಟಗಾರರಾಗಲಿದ್ದಾರೆ.
ಇನ್ನು ಒಟ್ಟಾರೆ ವಿಶ್ವಕಪ್ ವಿಷಯಕ್ಕೆ ಬಂದರೇ ಸಚಿನ್ ಖಾತೆಯಲ್ಲಿ ಏಳು ಅರ್ಧಶತಕಗಳಿದ್ದು, 16 ಸೆಂಚೂರಿಗಳಿವೆ.
ಇನ್ನು ವಿರಾಟ್ ಕೊಹ್ಲಿ ಖಾತೆಯಲ್ಲಿ ಎರಡು ಸೆಂಚೂರಿ, 21 ಹಾಫ್ ಸೆಂಚೂರಿಗಳಿವೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತಮ್ಮ ಕೆರಿಯರ್ ನಲ್ಲಿ ಕೇವಲ ಏಕದಿನ ವರ್ಲ್ಡ್ ಕಪ್ ಗಳನ್ನು ಮಾತ್ರ ಆಡಿದ್ದು, ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್, ಏಕದಿನ ವರ್ಲ್ಡ್ ಕಪ್ ಆಡಿದ್ದಾರೆ.
ಇನ್ನು ಟಿ 20 ವಿಶ್ವಕಪ್ ಭಾಗವಾಗಿ ಟೀಂ ಇಂಡಿಯಾ ಇಂದು ತನ್ನ ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗಲಿದೆ.