Virat Kohli | ದಾಖಲೆಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಾಧಿಸಿದ ದಾಖಲೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ಇಲ್ಲಿಯವರೆಗೂ 71 ಅಂತರಾಷ್ಟ್ರೀಯ ಸೆಂಚೂರಿಗಳನ್ನು ಸಾಧಿಸಿರುವ ವಿರಾಟ್ ಕೊಹ್ಲಿ, ಇನ್ನೂ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳಲಿದ್ದಾರೆ.
ಏಷ್ಯಾಕಪ್ ನಲ್ಲಿ ಸೆಂಚೂರಿ ಸಾಧಿಸಿದ ವಿರಾಟ್ ಕೊಹ್ಲಿ, ಟಿ 20 ಮಾದರಿಯಲ್ಲಿ ಸೆಂಚೂರಿ ಸಿಡಿಸಿದ ಏಳನೇ ಭಾರತೀಯ ಬ್ಯಾಟರ್ ಆಗಿದ್ದಾರೆ.
ಸುರೇಶ್ ರೈನಾ, ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಹರ್ಮನ್ ಪ್ರಿತ್ ಕೌರ್ ನಂತರ ವಿರಾಟ್ ಸೆಂಚೂರಿ ಸಿಡಿಸಿದ್ದಾರೆ.
ಇದು ಹೀಗಿದ್ದರೇ ಟಿ 20 ವಿಶ್ವಕಪ್ ಗೂ ಮುನ್ನಾ ಆಸ್ಟ್ರೇಲಿಯಾ, ದಕ್ಷಿಣಾಫ್ರಿಕಾ ವಿರುದ್ಧ ಟೀಂ ಇಂಡಿಯಾ ಸ್ವದೇಶದಲ್ಲಿ ಸರಣಿಗಳನ್ನು ಆಡಲಿದೆ.

ಈ ಸರಣಿಯಲ್ಲಿ ವಿರಾಟ್ ಮತ್ತಷ್ಟು ದಾಖಲೆಗಳನ್ನು ಸಾಧಿಸುವ ಅವಕಾಶಗಳಿವೆ. ಆಸ್ಟ್ರೇಲಿಯಾ ವಿರುದ್ಧ ವಿರಾಟ್ 98 ರನ್ ಗಳನ್ನು ಗಳಿಸಿದ್ರೆ ಟಿ 20 ಮಾದರಿಯಲ್ಲಿ 11 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಆಗಲಿದ್ದಾರೆ.
ಕೊಹ್ಲಿ ಇಲ್ಲಿಯವರೆಗೂ ಟಿ 20 ಮಾದರಿಯಲ್ಲಿ 349 ಮ್ಯಾಚ್ ಗಳಲ್ಲಿ 10902 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಸೆಂಚುರಿ, 80 ಅರ್ಧ ಶತಕಗಳಿವೆ. ಸ್ಟ್ರೇಕ್ ರೇಟ್ 132.95.
33 ವರ್ಷದ ಈ ಡೆಲ್ಲಿ ಬ್ಯಾಟರ್.. ಮತ್ತೊಂದು 63 ರನ್ ಗಳಿಸಿದ್ರೆ ಟೀಂ ಇಂಡಿಯಾದ ವಾಲ್, ಪ್ರಸ್ತುತ ಹೆಡ್ ಕೋಚ್ ರಾಹುಲ್ ದ್ರಾವಿಡ್ ವೈಯುಕ್ತಿಕ ರನ್ ದಾಖಲೆ ( 24064) ಅನ್ನು ದಾಟಲಿದ್ದಾರೆ.
ಇದರೊಂದಿಗೆ ಟೀಂ ಇಂಡಿಯಾ ಪರ ಸಚಿನ್ 34357 ರನ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಸಾಧಿಸಿದ ಎರಡನೇ ಕ್ರಿಕೆಟರ್ ಆಗಿ ನಿಲ್ಲಲಿದ್ದಾರೆ.
ವಿರಾಟ್ ಈವರೆಗೂ 468 ಅಂತರಾಷ್ಟ್ರೀಯ ಮ್ಯಾಚ್ ಗಳಲ್ಲಿ 24002 ರನ್ ಗಳನ್ನು ಗಳಿಸಿದ್ದಾರೆ. ಇದರಲ್ಲಿ 71 ಶತಕ, 124 ಅರ್ಧ ಶತಕಗಳಿವೆ.