ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ- ವಿರಾಟ್ ಐದನೇ ಸ್ಥಾನ, ಪಂತ್, ರೋಹಿತ್‍ಗೆ ಆರನೇ ಸ್ಥಾನ

1 min read
virat kohli rohith shama ashwin jadeja

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ- ವಿರಾಟ್ ಐದನೇ ಸ್ಥಾನ, ಪಂತ್, ರೋಹಿತ್‍ಗೆ ಆರನೇ ಸ್ಥಾನ

virat kohli saakshatv team indiaಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಅದೇ ರೀತಿ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಜಂಟಿಯಾಗಿ ಆರನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು 895 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಆಸ್ಟೇಲಿಯಾದ ಸ್ಟೀವನ್ ಸ್ಮಿತ್ ಎರಡನೇ ಸ್ಥಾನ ಹಾಗೂ ಮಾರ್ನಸ್ ಲಾಬುಸ್ಚೆಗ್ನೆ ಅವರು ಮೂರನೇ ಸ್ಥಾನದಲ್ಲಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜಾಯ್ ರೂಟ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ನ್ಯೂಜಿಲೆಂಡ್ ನ ಹೆನ್ರಿ ನಿಕೊಲಾಸ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಪಾಕಿಸ್ತಾನದ ಬಾಬರ್ ಅಝಮ್ ಅವರು ಕ್ರಮವಾಗಿ 8,9, 10ನೇ ಸ್ಥಾನದಲ್ಲಿದ್ದಾರೆ.

ravichandran ashwin team india saakshatvಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾದ ಆರ್. ಅಶ್ವಿನ್ ಅವರು ಟಾಪ್ ಟೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಟೀಮ್ ಇಂಡಿಯಾ ಬೌಲರ್ ಗಳು ಟಾಪ್ ಟೆನ್ ಲಿಸ್ಟ್ ನಲ್ಲಿಲ್ಲ.
ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ 908 ಅಂಕಗಳೊಂದಿಗೆ ಟಾಪ್ ವನ್ ನಲ್ಲಿದ್ರೆ, ಟೀಮ್ ಇಂಡಿಯಾದ ಸ್ಪಿನ್ನರ್ ಅಶ್ವಿನ್ ಅವರು 850 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಸೌಥಿ, ಜೋಶ್ ಹಾಝಲ್‍ವುಡ್, ನೇಲ್ ವಾಗ್ನರ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಜೇಸನ್ ಹೋಲ್ಡರ್, ಕಾಗಿಸೊ ರಬಾಡ, ಮಿಟ್ಚಲ್ ಸ್ಟಾರ್ಕ್ ಅವರು ಟಾಪ್ ಟೆನ್ ನಲ್ಲಿರುವ ಬೌಲರ್ ಗಳು..
ravindra jadeja team india saakshatvಆಲ್ ರೌಂಡರ್ ವಿಭಾಗದಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಎರಡನೇ ಸ್ಥಾನ ಹಾಗೂ ಆಶ್ವಿನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನುಳಿದಂತೆ ಶಕೀಬ್ ಉಲ್ ಹಸನ್, ಕೈಲ್ ಜಾಮಿನ್ಸನ್, ಮಿಟ್ಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಕಾಲಿನ್ ಹಾಗೂ ಕ್ರಿಸ್ ವೋಕ್ಸ್ ಟಾಪ್ ಟೆನ್ ಲಿಸ್ಟ್ ನಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd