ADVERTISEMENT
Monday, September 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಸೂರ್ಯಂಗೆ ಟಾರ್ಚ್ ಹಾಕೋಕೆ ಹೋಗಿ ಕೈಸುಟ್ಟುಕೊಂಡ ವಿರಾಟ್ – ಸ್ಲೆಡ್ಜಿಂಗ್ ಮಾಡಲು ಹೋಗಿ ಸಣ್ಣವರಾದ ಆರ್ ಸಿಬಿ ನಾಯಕ..!

Sanath Rai by Sanath Rai
October 29, 2020
in IPL 2020, Newsbeat, ಕ್ರೀಡೆ
virat kohli suryakumar yadav
Share on FacebookShare on TwitterShare on WhatsappShare on Telegram

Related posts

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

September 21, 2026
ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

September 21, 2026

ಸೂರ್ಯಂಗೆ ಟಾರ್ಚ್ ಹಾಕೋಕೆ ಹೋಗಿ ಕೈಸುಟ್ಟುಕೊಂಡ ವಿರಾಟ್

 ಸ್ಲೆಡ್ಜಿಂಗ್ ಮಾಡಲು ಹೋಗಿ ಸಣ್ಣವರಾದ ಆರ್ ಸಿಬಿ ನಾಯಕ..!

virat kohli suryakumar yadav saakshatvaಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕೆಲವು ಹಿರಿಯ ಕ್ರಿಕೆಟಿಗರು ಟೀಕೆ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲಿ ತನ್ನ ಆಪ್ತರಿಗೆ ಅವಕಾಶ ನೀಡುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬರುತ್ತಿದೆ.
ಮುಖ್ಯವಾಗಿ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತಿವೆ.
ವಿರಾಟ್ ಮತ್ತು ರೋಹಿತ್ ಸಂಬಂಧ ಅಷ್ಟಕ್ಕಷ್ಟೇ. ಹೀಗಾಗಿ ಗಾಯದ ನೆಪವೊಡ್ಡಿ ರೋಹಿತ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಅಂತ ಹೇಳಲಾಗುತ್ತಿದೆ.

ಈ ನಡುವೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಎದುರಾಳಿ ಬ್ಯಾಟ್ಸ್ ಮೆನ್ ನನ್ನು ಅಣಕಿಸುವ ಪ್ರಯತ್ನ ಮಾಡಿರುವುದು ಗೊತ್ತಾಗುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮೆನ್ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಸೂರ್ಯಕುಮಾರ್ ಯಾದವ್ ಅವರ ತಾಳ್ಮೆಯನ್ನು ಪರೀಕ್ಷೆ ಮಾಡಲು ವಿರಾಟ್ ಕೊಹ್ಲಿ ಮುಂದಾಗಿದ್ದಾರೆ.
suryakumar yadav virat kohliತನ್ನ ಪವರ್ ಫುಲ್ ಆಟದ ಮೂಲಕ ಆರ್ ಸಿಬಿಗೆ ಸೂರ್ಯಕುಮಾರ್ ಯಾದವ್ ಕಂಟಕವಾಗಿ ಪರಿಣಮಿಸುತ್ತಿದ್ದರು.
ಡೇಲ್ ಸ್ಟೇನ್ ಎಸೆತದಲ್ಲಿ ಸೂರ್ಯಕುಮಾರ್ ಬಾರಿಸಿದ ಚೆಂಡನ್ನು ವಿರಾಟ್ ಕೊಹ್ಲಿ ಕೈಯಲ್ಲಿ ಹಿಡಿದುಕೊಂಡು ಸೂರ್ಯಕುಮಾರ್ ಯಾದವ್ ಅವರ ಸನೀಹಕ್ಕೆ ಬಂದು ಮಾತನಾಡುತ್ತಿದ್ದರು.
ಆಗ ಸೂರ್ಯಕುಮಾರ್ ಯಾದವ್ ಕೂಡ ಸುಮ್ಮನೆ ಕೂರಲಿಲ್ಲ. ವಿರಾಟ್ ಕೊಹ್ಲಿಯವರನ್ನು ದಿಟ್ಟಿಸಿಕೊಂಡು ನೋಡುತ್ತಿದ್ದರು. ವಿರಾಟ್ ಮನಸಲ್ಲೇ ಮಾತನಾಡಿಕೊಂಡು ಏನೇನೋ ಹೇಳುತ್ತಿದ್ದರು. ಆದ್ರೆ ಸೂರ್ಯ ಕುಮಾರ್ ಯಾದವ್ ಸುಮ್ಮನೆ ಕೇಳಿಸಿಕೊಂಡು ತಮ್ಮ ಪಾಡಿಗೆ ತಾವು ನಿಂತಿದ್ದರು. ವಿರಾಟ್ ಕೊಹ್ಲಿ ಪಕ್ಕದಲ್ಲಿ ಬಂದು ಮಾತನಾಡುತ್ತಿದ್ರೂ ಏನು ಹೇಳದೇ ನಾನ್ ಸ್ಟ್ರೈಕರ್ ನತ್ತ ಹೆಜ್ಜೆ ಹಾಕಿದ್ದರು.
ಆದ್ರೆ ವಿರಾಟ್ ಕೊಹ್ಲಿಯ ವರ್ತನೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ ಜೊತೆಗೂ ಗಲಾಟೆ ಮಾಡಿಕೊಂಡಿದ್ದರು. ಐಪಿಎಲ್ ಸೇರಿದಂತೆ ಇನ್ನಿತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಸೈಲೆಂಟಾಗಿ ಸ್ಲೆಡ್ಜಿಂಗ್ ಮಾಡುತ್ತಿರುವುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಆದ್ರೆ ಐಪಿಎಲ್ ನಲ್ಲಿ ತಮ್ಮವರ ಜೊತೆಗೆ ಅದು ಕೂಡ ಯುವ ಬ್ಯಾಟ್ಸ್ ಮೆನ್ ಗಳ ಜೊತೆ ಸ್ಲೆಡ್ಜಿಂಗ್ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ?
suryakumar yadav mumbai indians saakshatv ಇನ್ನು ಸೂರ್ಯಕುಮಾರ್ ಯಾದವ್ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬೇಸರ ನೋವು ಅವರಲ್ಲೂ ಇದೆ. ಹೀಗಾಗಿಯೇ ರೊಚ್ಚಿಗೆದ್ದು ಆಟವಾಡುತ್ತಿದ್ದಾರೆ.
ಅದು ಅಲ್ಲದೆ ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ನಾನು ಇದ್ದೇನೆ.. ಕೂಲ್ ಆಗಿರಿ.. ಅಂತ ಪೆವಿಲಿಯನ್‍ನತ್ತ ಸನ್ನೆ ಮಾಡಿ ತೋರಿಸುತ್ತಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮಾಡಿರುವ ಸ್ಲೆಡ್ಜಿಂಗ್‍ಗೆ ಸೂರ್ಯಕುಮಾರ್ ಯಾದವ್ ಕೂಡ ಸರಿಯಾದ ಉತ್ತರವನ್ನೇ ನೀಡಿದ್ದಾರೆ.
ಆದ್ರೆ ಇಲ್ಲಿ ಸಣ್ಣವರಾಗಿದ್ದು ವಿರಾಟ್ ಕೊಹ್ಲಿ. ಯುವ ಆಟಗಾರನ ಆಟವನ್ನು ಮೆಚ್ಚಿಕೊಳ್ಳುವುದರ ಬದಲು ಅವರನ್ನು ಸ್ಲೆಡ್ಜಿಂಗ್ ಮೂಲಕ ಕುಗ್ಗುವಂತೆ ಮಾಡುವುದು ಸರಿಯಲ್ಲ. ಒಂದು ವೇಳೆ ಸೂರ್ಯಕುಮಾರ್ ಯಾದವ್ ಕೂಡ ಮಾತಿಗೆ ಮಾತು ಬೆಳೆಸುತ್ತಿದ್ರೆ ವಿರಾಟ್ ಕೊಹ್ಲಿಯ ನಾಯಕತ್ವಕ್ಕೆ ಮತ್ತು ಇಮೇಜ್‍ಗೆ ದಕ್ಕೆಯಾಗುತ್ತಿತ್ತು.
ನಾಯಕನಾದವನು ಎಷ್ಟೇ ಆಕ್ರಮಣಕಾರಿ ಪ್ರವೃತ್ತಿಯಾಗಿದ್ರೂ ಕೂಡ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ವಿರಾಟ್ ಕೊಹ್ಲಿ ಅದ್ಭುತವಾಗಿ ಆಡುತ್ತಾರೆ. ರನ್ ಮೇಷಿನ್, ದಾಖಲೆ ವೀರ ಹೀಗೆ ನಾನಾ ರೀತಿಯ ಗೌರವಗಳು ಇವೆ. ಆದ್ರೆ ವಿರಾಟ್ ತನ್ನತನವನ್ನು ಉಳಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಬಹುಶಃ ವಿರಾಟ್ ಅದನ್ನು ಮೆರೆತಿದ್ದಾರೆ.

Tags: #saakshatvIPL 2020mumbai indiansRCBRCB skipper virat tries sledgingSuryakumar Yadavvirat kohli
ShareTweetSendShare
Join us on:

Related Posts

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

by Shwetha
September 21, 2026
0

ಮಂಗಳೂರು: ಕರಾವಳಿ ಜನರ ದಶಕಗಳ ಕನಸು ಹಾಗೂ ತುಳುನಾಡಿನ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ರಾಜ್ಯ...

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

by Shwetha
September 21, 2026
0

ಕಲಬುರಗಿ: ಕಲಬುರಗಿ ನಗರದ ಹೃದಯಭಾಗದಲ್ಲಿರುವ ಹೈಕೋರ್ಟ್ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆ ಮತ್ತು ಅದರ ಬೆನ್ನಲ್ಲೇ ನಡೆದ ತೆರವು ಕಾರ್ಯಾಚರಣೆ ಈಗ ರಾಜ್ಯ...

ಹೇ ಧನಂಜಯ ಬಾರೋ ಇಲ್ಲಿಗೆ ಅಂದಿದ್ದೇ ಮುಳುವಾಯ್ತು:ಪೊಲೀಸರ ವಿರುದ್ಧವೇ ತೊಡೆ ತಟ್ಟಿದ್ದ ಸಿಂಹಗೆ ಈಗ ಎಫ್‌ಐಆರ್ ಸಂಕಷ್ಟ-ನಾವು ಬಗ್ಗಲ್ಲ ಜಗ್ಗಲ್ಲ ಅಂದ್ರು ಆರ್ ಅಶೋಕ್

ಹೇ ಧನಂಜಯ ಬಾರೋ ಇಲ್ಲಿಗೆ ಅಂದಿದ್ದೇ ಮುಳುವಾಯ್ತು:ಪೊಲೀಸರ ವಿರುದ್ಧವೇ ತೊಡೆ ತಟ್ಟಿದ್ದ ಸಿಂಹಗೆ ಈಗ ಎಫ್‌ಐಆರ್ ಸಂಕಷ್ಟ-ನಾವು ಬಗ್ಗಲ್ಲ ಜಗ್ಗಲ್ಲ ಅಂದ್ರು ಆರ್ ಅಶೋಕ್

by Shwetha
September 21, 2026
0

ಮೈಸೂರು: ಟಿ ನರಸೀಪುರದಲ್ಲಿ ನಡೆದ ಗಣೇಶ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ, ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್...

ರೈತರ ಹಿತಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ: ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದ ಡಿ ಕೆ ಶಿವಕುಮಾರ್ ಸರ್ಕಾರ!

ರೈತರ ಹಿತಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ: ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದ ಡಿ ಕೆ ಶಿವಕುಮಾರ್ ಸರ್ಕಾರ!

by Shwetha
September 21, 2026
0

ಬೆಂಗಳೂರು: ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ನಂದಿನಿ ಹಾಲಿನ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಗಂಭೀರ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

by Shwetha
September 21, 2026
0

ಬೆಂಗಳೂರು: ರಾಜಾಜಿನಗರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಜ್ಜನ ಎಂಬ ಮುಖವಾಡ ಧರಿಸಿದ ದುರ್ಜನ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram