ಸೌರವ್ ಗಂಗೂಲಿಗೆ ನಾಯಕನ ಪಾಠ ಹೇಳಿಕೊಟ್ಟಿದ್ದ ವೀರೇಂದ್ರ ಸೆಹ್ವಾಗ್..!

1 min read
Virender Sehwag Sourav Ganguly team india saakshatv

ಸೌರವ್ ಗಂಗೂಲಿಗೆ ನಾಯಕನ ಪಾಠ ಹೇಳಿಕೊಟ್ಟಿದ್ದ ವೀರೇಂದ್ರ ಸೆಹ್ವಾಗ್..!

Virender Sehwag  Sourav Ganguly team india saakshatvಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು 2002ರ ನ್ಯಾಟ್ ವೆಸ್ಟ್ ಫೈನಲ್ ಪಂದ್ಯದ ಐತಿಹಾಸಿಕ ಗೆಲುವನ್ನು ಸ್ಮರಿಸಿಕೊಂಡಿದ್ದಾರೆ.
ಅಲ್ಲದೆ ಈ ಫೈನಲ್ ಪಂದ್ಯದಲ್ಲಿ ಒಳ್ಳೆಯ ಪಾಠವನ್ನು ಕಲಿತಿದ್ದಾರಂತೆ. ನಾಯಕ ಹೇಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಪಂದ್ಯ ಸಹಕಾರಿಯಾಯ್ತು ಎಂದು ಹೇಳಿಕೊಂಡಿದ್ದಾರೆ.
ಅಂದ ಹಾಗೇ, ಗಂಗೂಲಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದು, ನಾಯಕ ಆಟಗಾರನ ಮನಸ್ಸನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು, ಮ್ಯಾನ್ ಮ್ಯಾನೇಜ್ ಮೆಂಟ್ ಅನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಗಂಗೂಲಿಗೆ ಹೇಳಿಕೊಟ್ಟಿದ್ದು ವೀರೇಂದ್ರ ಸೆಹ್ವಾಗ್.
ಇದು ಅಚ್ಚರಿಯಾದ್ರೂ ಸತ್ಯ. ಟೀಮ್ ಇಂಡಿಯಾದ ನಾಯಕ ಸೌರವ್ ಗಂಗೂಲಿ, ಆಗಿನ ಯುವ ಆಟಗಾರನಾಗಿದ್ದ ಸೆಹ್ವಾಗ್ ಪಾಠ ಮಾಡಿದ್ದಾರೆ ಅಂದ್ರೆ ನಂಬುದು ಸ್ವಲ್ಪ ಕಷ್ಟ. ಆದ್ರೂ ಇದು ನಿಜ. ಈ ವಿಚಾರವನ್ನು ಸೌರವ್ ಗಂಗೂಲಿಯವೇ ಹೇಳಿಕೊಂಡಿದ್ದಾರೆ.
ನ್ಯಾಟ್ ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ್ದು ಈಗ ಇತಿಹಾಸ. ಯುವರಾಜ್ ಸಿಂಗ್ ಮತ್ತು ಮಹಮ್ಮದ್ ಕೈಫ್ ತಂಡವನ್ನು ಗೆಲುವಿನ ದಡ ಸೇರಿಸಿದ್ದು, ಗಂಗೂಲಿ ಲಾಡ್ರ್ಸ್ ಅಂಗಣದ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಕುಣಿದಾಡಿದ್ದು ಎಲ್ಲವೂ ನೆನಪಿಗೆ ಬರುತ್ತೆ.

Virender Sehwag taught Sourav Ganguly a key lesson in captaincy

Virender Sehwag  Sourav Ganguly team india saakshatvಆದ್ರೆ ಈ ಘಟನೆಗಳು ನಡೆಯುವುದಕ್ಕಿಂತ ಮುನ್ನ ಗಂಗೂಲಿ ಸೆಹ್ವಾಗ್ ಈ ಪಂದ್ಯದಲ್ಲಿ ಯಾವ ರೀತಿ ಆಡಿದ್ರು, ನಾಯಕನಾದ ನನಗೆ ಹೇಗೆ ಸಿಟ್ಟು ಭರಿಸಿದ್ರು, ಆಮೇಲೆ ಆಟಗಾರನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು ಎಂಬುದನ್ನು ಸಹ ಗಂಗೂಲಿ ಹೇಳಿದ್ದಾರೆ.
ಗೆಲ್ಲಲು 326 ರನ್ ಗಳ ಗುರಿ ಟೀಮ್ ಇಂಡಿಯಾಗಿತ್ತು. ನಾನು ಮತ್ತು ಸೆಹ್ವಾಗ್ ಇನಿಂಗ್ಸ್ ಆರಂಭಿಸಲು ಕ್ರೀಸ್ ಗೆ ಬಂದ್ವಿ. ಆಗ ನಾನು ತುಂಬಾ ಒತ್ತಡದಲ್ಲಿದ್ದೆ. ನನ್ನ ಮನಸ್ಥಿತಿಯೂ ಸರಿಯಾಗಿರಲಿಲ್ಲ. ಆಗ ಸೆಹ್ವಾಗ್ ನನ್ನ ಬಳಿ ಬಂದು ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಅಂದ್ರು. ಅದಕ್ಕೆ ತಕ್ಕಂತೆ ನಾವು ಉತ್ತಮ ಆರಂಭವನ್ನು ಪಡೆದುಕೊಂಡಿದ್ದೇವು. 12 ಓವರ್ ಗಳಲ್ಲಿ 82 ರನ್ ಕೂಡ ಕಲೆ ಹಾಕಿದ್ದೇವು. ಆಗ ಸೆಹ್ವಾಗ್ ಬಳಿ ಬಂದು ನಾನು ಹೀಗೆ ಹೇಳಿದ್ದೆ. ಈಗ ಹೊಸ ಬೌಲರ್ ಬರುತ್ತಾನೆ. ಅದಷ್ಟು ನಾವು ಒಂಟಿ ರನ್ ಕಡೆಗೆ ಹೆಚ್ಚಿನ ಗಮನ ಹರಿಸೋಣ ಎಂದು ನಾನು ಸೆಹ್ವಾಗ್ ಗೆ ಸಲಹೆ ನೀಡಿದ್ದೆ.
ಆದ್ರೆ ರೋನಿಯ್ ಇರಾನಿ ಬೌಲಿಂಗ್ ಮಾಡಲು ಶುರು ಮಾಡಿದ್ರು. ಮೊದಲ ಎಸೆತದಲ್ಲೇ ಸೆಹ್ವಾಗ್ ಬೌಂಡರಿ ಸಿಡಿಸಿದ್ರು. ಆಗ ಸೆಹ್ವಾಗ್ ಬಳಿ ಬಂದು ಬೌಂಡರಿ ಬಂತು. ಮುಂದಿನ ಎಸೆತದಲ್ಲಿ ಒಂದು ರನ್ ಗಳಿಸು ಎಂದು ಹೇಳಿದ್ದೆ. ಆದ್ರೆ ಎರಡನೇ ಎಸೆತದಲ್ಲೂ ಸೆಹ್ವಾಗ್ ಬೌಂಡರಿ ದಾಖಲಿಸಿದ್ರು. ಮೂರನೇ ಎಸೆತದಲ್ಲೂ ನಾಲ್ಕು ರನ್ ಗಳಿಸಿದ್ರು. ನನ್ನ ಮಾತು ಸೆಹ್ವಾಗ್ ಕೇಳಲೇ ಇಲ್ಲ. ನನಗೆ ಆಗ ಸಿಟ್ಟು ಬಂತು. ಆದ್ರೂ ಸೆಹ್ವಾಗ್ ಐದನೇ ಎಸೆತವನ್ನು ಬೌಂಡರಿಗಟ್ಟಿದ್ದರು. ಆಗ ನನಗೆ ಅನ್ನಿಸಿದ್ದು, ಸೆಹ್ವಾಗ್ ಅವರ ನೈಜ ಆಟವನ್ನು ತಡೆಯುವುದು ಸರಿಯಲ್ಲ ಎಂದು. ಅಷ್ಟೇ ಅಲ್ಲ, ಆಟಗಾರನ ಮನಸ್ಥಿತಿಗೆ ತಕ್ಕಂತೆ ನಾಯಕ ಕೂಡ ಸರಿದೂಗಿಸಿಕೊಂಡು ಹೋಗಬೇಕು ಎಂಬುದು ತಿಳಿಯಿತ್ತು ಎಂದು ಸೌರವ್ ಗಂಗೂಲಿ ತನ್ನ ಹಳೆಯ ದಿನಗಳ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd