Sehwag | ರೋಹಿತ್ ನ ವಡಾ ಪಾವ್ ಎಂದ ಸೆಹ್ವಾಗ್ ಟ್ರೋಲ್

1 min read
virender-sehwag-vada-pav-tweet saaksha tv

Sehwag | ರೋಹಿತ್ ನ ವಡಾ ಪಾವ್ ಎಂದ ಸೆಹ್ವಾಗ್ ಟ್ರೋಲ್

ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬಂತೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸೋತ ಮುಂಬೈ ಇಂಡಿಯನ್ಸ್ ಮೇಲೆ ಟೀಕೆಗಳ ಸುರಿಮಳೆಯಾಗುತ್ತಲೇ ಇದೆ.

ಅದರಲ್ಲೂ ಕೆಕೆಆರ್ ತಂಡದ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಅಬ್ಬರದ ಬ್ಯಾಟಿಂಗ್ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್  5 ಎಸೆತಗಳಲ್ಲಿ ಔಟಾಗದೆ 56 ರನ್ ಸಿಡಿಸಿದರು. ಇದರಲ್ಲಿ 4 ಬೌಂಡರಿ, 6 ಸಿಕ್ಸರ್ ಗಳಿವೆ.

ಕಮಿನ್ಸ್ ಸುನಾಮಿ ಇನ್ನಿಂಗ್ಸ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.

ಕಮ್ಮಿನ್ಸ್ ಅವರ 14 ಎಸೆತಗಳ ಅರ್ಧಶತಕವನ್ನು ಉಲ್ಲೇಖಿಸಿ, “ಬಾಯಿ ಬಳಿ ಇದ್ದ ವಡಾ ಪಾವ್ ಅನ್ನ ಕಿತ್ತುಕೊಂಡು ಬಿಟ್ಟ.. ಸಾರಿ ವಡಾ ಪಾವ್ ಎಂದು ವೀರೂ ಟ್ವೀಟ್ ಮಾಡಿದ್ದಾರೆ.

virender-sehwag-vada-pav-tweet saaksha tv

ಸೆಹ್ವಾಗ್ ಅವರ ತಮಾಷೆಯ ಈ ಟ್ವೀಟ್ ಹಿಟ್ ಮ್ಯಾನ್ ಅಭಿಮಾನಿಗಳನ್ನು ಕೆರಳಿಸಿದೆ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಗುರಿಯಾಗಿಸಿಕೊಂಡು ಸೆಹ್ವಾಗ್ ಮಾಡಿರುವ ವ್ಯಂಗ್ಯ ಟ್ವೀಟ್ ಅನ್ನು ಹಿಟ್ ಮ್ಯಾನ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಕಮ್ಮಿನ್ಸ್ ಮೈ ಮೇಲೆ ದೆವ್ವಾ ಬಂದಂತೆ ಅಬ್ಬರಿಸಿದ್ರೆ ರೋಹಿತ್ ಏನು ಮಾಡಬಲ್ಲರು ಎಂದು ವೀರೂಗೆ ಕೌಂಟರ್ ಕೊಡುತ್ತಿದ್ದಾರೆ.

ಅಷ್ಟಕ್ಕೇ ನಿಲ್ಲದೆ ರೋಹಿತ್ ಶರ್ಮಾ ಅವರನ್ನು ವಡಾ ಪಾವ್ ಜೊತೆ ಪರೋಕ್ಷವಾಗಿ ಹೋಲಿಸಿದ್ದಕ್ಕೆ ಸೆಹ್ವಾಗ್ ವಿರುದ್ಧ ಕಿಡಿಕಾರುತ್ತಿದ್ದಾರೆ.

virender-sehwag-vada-pav-tweet

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd