Vivo ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ವಿವೋ Y77e 5G ಸ್ಮಾರ್ಟ್‌ಫೋನ್ ಬಿಡುಗಡೆ
Y ಸರಣಿಯಲ್ಲಿ ವಿವೋ ಹೊಸ ಸ್ಮಾರ್ಟ್ ಫೋನ್
ಇದರ ಬೆಲೆ ಸುಮಾರು 20 ಸಾವಿರ ರೂಪಾಯಿ
ವಿವೋ Y77e 5G 6.58-ಇಂಚಿನ ಫುಲ್ HD+ ಡಿಸ್‌ಪ್ಲೇ
ವಿವೋ ಸ್ಮಾರ್ಟ್ ಫೋನ್ ತನ್ನ ತನ್ನ Y ಸರಣಿಯ ಮತ್ತೊಂದು ಫೋನ್ವೊಂದನ್ನು ಪರಿಚಯಿಸಿದೆ.
ಅದುವೇ ವಿವೋ ವೈ77ಇ 5ಜಿ (Vivo Y77e 5G). ಈ ಫೋನ್ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿವೆ.
ಸದ್ಯ ಈ ಫೋನ್ ಚೀನಾದಲ್ಲಿ ಲಭ್ಯವಿದೆ. ಇದು 8GB RAM + 128GB ಸ್ಟೋರೇಜ್ ಹೊಂದಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 20,000ರೂ. ಎನ್ನಬಹುದು.
ಅಲ್ಲದೆ 6.58-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ.

ಈ ಡಿಸ್‌ಪ್ಲೇ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ.
ವಿವೋ Y77e 5G ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.