Vivo V25 5G: ಭಾರಿ ರಿಯಾಯಿತಿಯಲ್ಲಿ ಖರೀದಿಗೆ ಲಭ್ಯ – 50MP ಸೆಲ್ಫಿ ಕ್ಯಾಮೆರಾ
ವಿವೋ ಬಿಡುಗಡೆ ಮಾಡಿರುವ ನೂತನ 5G ಮಾಡೆಲ್ Vivo V25 5G ಸ್ಮಾರ್ಟ್ ಪೋನ್ ಸೆಪ್ಟೆಂಬರ್ 20 ರಿಂದ ದೇಶದಲ್ಲಿ ಖರೀಗೆ ಲಭ್ಯವಿದೆ.
ಮೊಬೈಲ್ ಪ್ರಮುಖ ಫೀಚರ್ ಎಂದರೆ 50MP AI AF ಸೆಲ್ಫಿ ಕ್ಯಾಮೆರಾ ಮತ್ತು ಹಿಂಬದಿಯಲ್ಲಿ 64MP OIS ನೈಟ್ ಕ್ಯಾಮೆರಾವನ್ನ ನೀಡಿರುವುದು, ಬಣ್ಣ ಬದಲಾಯಿಸುವ ಫ್ಲೋರೈಟ್ AG ಬ್ಯಾಕ್ ಪ್ಯಾನೆಲ್‌ನೊಂದಿಗೆ ಪ್ರೀಮಿಯಂ ವಿನ್ಯಾಸದೊಂದಿಗೆ ರಿಲೀಸ್ ಆಗಿದೆ. Vivo V25 5G ಅನ್ನುಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಮತ್ತು ವಿವೋ ಇ-ಸ್ಟೋರ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಖರೀದಿಸಲು ಲಭ್ಯವಿದೆ.
Vivo V25 5G ಇನ್ನಿತರ ವಿಶೇಷತೆಗಳೆಂದರೆ..
ಈ ಸ್ಮಾರ್ಟ್‌ಫೋನ್ ವಾಟರ್‌ಡ್ರಾಪ್ ಶೈಲಿಯ ನಾಚ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದ್ದು, 6.44-ಇಂಚಿನ ಸ್ಕ್ರೀನ್ ಜೊತೆಗೆ Fully HD + ರೆಸಲ್ಯೂಶನ್ ನೊಂದಿಗೆ ಹೊರ ಬರುತ್ತಿದೆ . ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್ ನಿಂದ ಚಾಲಿತವಾಗಿದೆ ಎಂಬುದುದನ್ನ ತಪ್ಪದೆ ಗಮನಿಸಿ. ಇದು OnePlus Nord CE 2 ನಂತಹ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿದೆ.
ಸ್ಮಾರ್ಟ್ ಪೋನ್ ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಪೋಟೋಗ್ರಾಫಿಗಾಗಿ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದರಲ್ಲಿ 64-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಗಳನ್ನ ಹೊಂದಿದೆ. ಕ್ಯಾಮರಾ ಅಪ್ಲಿಕೇಶನ್ ನೈಟ್ ಮೋಡ್, ಪೋರ್ಟ್ರೇಟ್, ಸ್ಲೋ ಮೋಷನ್, ಟೈಮ್ ಲ್ಯಾಪ್ಸ್, ವ್ಲಾಗ್ ಮೂವಿ ಮತ್ತು ಡ್ಯುಯಲ್ ವ್ಯೂ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೆನ್ಸಾರ್ ಇದೆ ಎನ್ನುವುದು ವಿಶೇಷ.