Vivo Y35M : 8GB RAM – 5,000mAh ಬ್ಯಾಟರಿ; ಬಜೆಟ್ ಬೆಲೆಗೆ ಪೋನ್ ಬಿಡುಗಡೆ ಮಾಡಿದ ವಿವೋ…
ಸ್ಮಾರ್ಟ್‌ಫೋನ್ ತಯಾರಕ ಕಂಪನಿ Vivo, Y ಸರಣಿಯ ಅಡಿಯಲ್ಲಿ ಮತ್ತೊಂದು Vivo Y35M ಎಂಬ ಸ್ಮಾರ್ಟ್ ಪೋನ್ ನ್ನ ಬಿಡುಗಡೆ ಮಾಡಿದೆ. ಈ ಫೋನ್ ನ ಇತರ ಪೀಚರ್ಸ್ ಗಳು ಮತ್ತು ಬೆಲೆಯ ಬಗ್ಗೆ ತಿಳಿಯೋಣ…
ಫೀಚರ್ಸ್..
Vivo ಹೊಸ ಫೋನ್ ನಲ್ಲಿ 6.51-ಇಂಚಿನ HD ಪ್ಲಸ್ IPS LCD ಡಿಸ್ಪ್ಲೇ, 60 Hz ರಿಫ್ರೆಶ್ ರೇಟ್ ನೊಂದಿಗೆ ಬಿಡುಗಡೆಯಾಗಿದೆ. ಡೈಮೆನ್ಶನ್ 700 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದೆ. 4GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೊರೇಜ್ ನೊಂದಿಗೆ ಚಾಯ್ಸ್ ಮಾಡಬಹುದು. ಮೈಕ್ರೊ SD ಕಾರ್ಡ್ ಸಹಾಯದಿಂದ ಇನ್ನೂ ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದಾದ ಅವಕಾಶ ಇದೆ.
4GB RAM + 128GB ಬೆಲೆ 16,800 ಮತ್ತು 8GB RAM + 128GB ಮೊಬೈಲ್ ಬೆಲೆ 20,400 ಎಂದು ಅಂದಾಜಿಸಲಾಗಿದೆ.
ಕ್ಯಾಮೆರಾ ಮತ್ತು ಬ್ಯಾಟರಿ
Vivo Y35M ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಕೆಂಡರಿ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಹಿಂಬದಿಯ ಕ್ಯಾಮೆರಾದೊಂದಿಗೆ LED ಫ್ಲಾಷ್ ಕೂಡ ಇದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ನಿಡಲಾಗಿದೆ.
Vivo Y35M, 15W ವೇಗದ ಚಾರ್ಜಿಂಗ್ ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸುತ್ತದೆ. ಮೊಬೈಲ್ ಸೆಕ್ಯೂರಿಟಿಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.
Vivo Y35M : 8GB RAM – 5,000mAh battery; Vivo has launched a phone at a budget price…